ದಯವಿಟ್ಟು ಆ ನಿರ್ಧಾರ ಮಾತ್ರ ತಗೋಬೇಡಿ! ಕಿಂಗ್​ ಕೊಹ್ಲಿಗೆ ವೆಸ್ಟ್​ ಇಂಡೀಸ್​ ಮಾಜಿ ಕ್ರಿಕೆಟಿಗನ ಮನವಿ | Virat Kohli

ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು ಇದೀಗ ಟಾಕ್​ ಆಫ್​ ದಿ ಟೌನ್​ ಆಗಿದೆ. ಇಡೀ ಕ್ರಿಕೆಟ್​ ಲೋಕವೇ ಕೊಹ್ಲಿ ಆಟಕ್ಕೆ ತಲೆಬಾಗಿ, ಅಭಿನಂದನೆಗಳ ಮಹಾಪೂರ ಹರಿಸುತ್ತಿರುವ ಮಧ್ಯೆ ವಿಂಡೀಸ್​ನ ಮಾಜಿ ಕ್ರಿಕೆಟಿಗರೊಬ್ಬರು ದಿಗ್ಗಜನಿಗೆ ವಿಶೇಷ ಮನವಿ ಮಾಡಿದ್ದಾರೆ.
Virat Kohli
ದಯವಿಟ್ಟು ಆ ನಿರ್ಧಾರ ಮಾತ್ರ ತಗೋಬೇಡಿ! ಕಿಂಗ್​ ಕೊಹ್ಲಿಗೆ ವೆಸ್ಟ್​ ಇಂಡೀಸ್​ ಮಾಜಿ ಕ್ರಿಕೆಟಿಗನ ಮನವಿ
Published on: 

Virat Kohli: ನಿನ್ನೆ (ಸೆ.27) ತಿರುವನಂತಪುರಂನಲ್ಲಿ ನಡೆದ ಟೀಮ್ ಇಂಡಿಯಾ ಮತ್ತು ವೆಸ್ಟ್​ ಇಂಡೀಸ್​ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ತಂಡದ ಪರ 'ರನ್ ಮೆಷಿನ್', 'ದಾಖಲೆಗಳ ಸರದಾರ', 'ಚೇಸ್​ ಮಾಸ್ಟರ್'​ ಎಂದೇ ಖ್ಯಾತಿ ಪಡೆದಿರುವ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದು ಇದೀಗ ಟಾಕ್​ ಆಫ್​ ದಿ ಟೌನ್​ ಆಗಿದೆ. ಇಡೀ ಕ್ರಿಕೆಟ್​ ಲೋಕವೇ ಕೊಹ್ಲಿ ಆಟಕ್ಕೆ ತಲೆಬಾಗಿ, ಅಭಿನಂದನೆಗಳ ಮಹಾಪೂರ ಹರಿಸುತ್ತಿರುವ ಮಧ್ಯೆ ವಿಂಡೀಸ್​ನ ಮಾಜಿ ಕ್ರಿಕೆಟಿಗರೊಬ್ಬರು ದಿಗ್ಗಜನಿಗೆ ವಿಶೇಷ ಮನವಿ ಮಾಡಿದ್ದಾರೆ.

ಕೇವಲ 88 ಎಸೆತಗಳಲ್ಲಿ ಅಜೇಯ 139 ರನ್​ ಸಿಡಿಸಿದ ವಿರಾಟ್​, ತಂಡವನ್ನು ಸುಲಭವಾಗಿ ಗೆಲುವಿನೆಡೆಗೆ ಕೊಂಡೊಯ್ದಿದ್ದು ಟೀಮ್ ಇಂಡಿಯಾ ಅಭಿಮಾನಿಗಳ ಅತೀವ ಸಂತಸಕ್ಕೆ ಕಾರಣವಾಯಿತು. ಇದೇ ಸಂದರ್ಭದಲ್ಲಿ, ವಿರಾಟ್ ಕೊಹ್ಲಿ ಅವರ ಏಕದಿನ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ವೆಸ್ಟ್ ಇಂಡೀಸ್ ಮಾಜಿ ಲೆಗ್ ಸ್ಪಿನ್ನರ್ ಸ್ಯಾಮ್ಯುಯೆಲ್ ಬದ್ರಿ ಆಸಕ್ತಿದಾಯಕ ಕಾಮೆಂಟ್ ಮಾಡಿದ್ದು, ಅಪಾರ ಸಂಖ್ಯೆಯ ಕೊಹ್ಲಿ ಅಭಿಮಾನಿಗಳ ಗಮನ ಸೆಳೆದಿದೆ.

ಈಗಾಗಲೇ 2027ರ ಏಕದಿನ ವಿಶ್ವಕಪ್​ ನನ್ನ ಕೊನೇ ಎಂದು ಹೇಳಿರುವ ವಿರಾಟ್​ ಮಾತು ಕ್ರಿಕೆಟ್​ ಪ್ರೇಮಿಗಳಲ್ಲಿ ಭಾರಿ ಬೇಸರ ಮೂಡಿಸಿದೆ. ಇದನ್ನೇ ಒತ್ತಿ ಹೇಳಿದ ಸ್ಯಾಮ್ಯುಯೆಲ್​, ದಯವಿಟ್ಟು ನಿವೃತ್ತಿ ಘೋಷಿಸುವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ವಿರಾಟ್​. ನಿಮ್ಮ ಅನುಭವ, ಸ್ಥಿರತೆ ಮತ್ತು ಏಕದಿನ ಮಾದರಿಯಲ್ಲಿ ನೀವು ಆಟದ ಮೇಲೆ ಬೀರುವ ಪ್ರಭಾವ ಪ್ರಶಂಸನೀಯ. ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್​ರ ಅನುಭವ ಭಾರತ ತಂಡಕ್ಕೆ ತುಂಬಾ ಉಪಯುಕ್ತವಾಗಲಿದೆ. ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಕೊಹ್ಲಿಗೆ ಒತ್ತಡದ ಸಂದರ್ಭಗಳನ್ನು ಎದುರಿಸಿದ ಅನುಭವವಿದ್ದು, ನಿರ್ಣಾಯಕ ಪಂದ್ಯಗಳಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಸಾಮರ್ಥ್ಯವೂ ಇದೆ ಎಂದರು.

ಕೊಹ್ಲಿ ಏಕದಿನ ಕ್ರಿಕೆಟ್​​ನಲ್ಲಿ ಮುಂದುವರಿದರೆ ಯುವ ಆಟಗಾರರಿಗೆ ಇತರೆ ಫಾರ್ಮೆಟ್‌ಗಳಲ್ಲಿ ಹೆಚ್ಚಿನ ಅವಕಾಶ ಸಿಗಲಿದೆ. ಹೊಸ ತಲೆಮಾರಿನ ಆಟಗಾರರು ಟೆಸ್ಟ್ ಮತ್ತು ಟಿ20ಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಅವಕಾಶ ಪಡೆಯಬಹುದು ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಏಕದಿನ ಹಾಗೂ ಟೆಸ್ಟ್ ಪಂದ್ಯಗಳತ್ತ ಮಾತ್ರ ಅವರ ಗಮನ ಹರಿದಿದ್ದು, 2027ರ ಏಕದಿನ ವಿಶ್ವಕಪ್ ಅವರ ಕೊನೇ ಇನ್ನಿಂಗ್ಸ್​ ಆಗಿರಲಿದೆ ಎಂಬುದು ಅಭಿಮಾನಿಗಳಿಗೆ ನೋವಿನ ಸಂಗತಿಯಾಗಿದೆ. ​

15,000 ರನ್​ಗಳ ಸರದಾರ

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ ಬ್ಯಾಟಿಂಗ್‌ನಿಂದ ವಿಂಡೀಸ್​ ಪಡೆಯನ್ನು ಅಕ್ಷರಶಃ ಕಂಗಾಲಾಗಿಸಿದರು. 88 ಎಸೆತಗಳಲ್ಲಿ ಅಜೇಯ 139 ರನ್ ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಇನ್ನಿಂಗ್ಸ್‌ನೊಂದಿಗೆ ಅವರು ಏಕದಿನ ಕ್ರಿಕೆಟ್‌ನಲ್ಲಿ 15,000 ರನ್‌ಗಳ ಮೈಲಿಗಲ್ಲನ್ನೂ ತಲುಪಿದರು. ತಮ್ಮ ಏಕದಿನ ಶತಕಗಳ ಸಂಖ್ಯೆಯನ್ನು 55ಕ್ಕೆ ಏರಿಸಿಕೊಂಡ ಕಿಂಗ್​ ಕೊಹ್ಲಿಗೆ ಫ್ಯಾನ್ಸ್​ ಸಲಾಂ ಎಂದಿದ್ದಾರೆ. ಅಲ್ಲದೆ, ಈ ಮೈಲಿಗಲ್ಲು ಮುಟ್ಟಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಮತ್ತೊಂದು ಖುಷಿಯ ಸಂಗತಿ ಏನೆಂದರೆ ಈ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸುವ ಮೂಲಕ ಮುಂದಿನ ವಿಶ್ವಕಪ್​ ಟೂರ್ನಿಗೆ ತಮ್ಮ ಸ್ಥಾನ ಖಚಿತ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net