ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 9 ವಿಕೆಟ್‌ಗಳ ನಷ್ಟಕ್ಕೆ 194 ರನ್ ಗಳಿಸಿತು. ಅಭಿಷೇಕ್ ಶರ್ಮಾ (59) ಮತ್ತು ಕ್ಲಾಸೆನ್ (59) ಅರ್ಧಶತಕಗಳೊಂದಿಗೆ ಮಿಂಚಿದರು. 195 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ಎಂಟು ವಿಕೆಟ್‌ಗಳ ನಷ್ಟಕ್ಕೆ ಕೇವಲ 184 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲೂ ಹೈದರಾಬಾದ್ ಬೌಲರ್‌ಗಳು ಮತ್ತೊಮ್ಮೆ ತಮ್ಮ ತಂಡದ ಪರ ಮಿಂಚಿದರು. ಎದುರಾಳಿ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ಮಾಲಿಂಗ ಮೂರು, ನಿತೀಶ್ ರೆಡ್ಡಿ ಎರಡು ಮತ್ತು ಶಿವಂಗ್ ಕುಮಾರ್ ಒಂದು ವಿಕೆಟ್ ಪಡೆದು ಎಸ್ಆರ್ಎಚ್ ಗೆಲುವಿಗೆ ಕಾರಣರಾದರು,(ಏಜೆನ್ಸೀಸ್).