ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ (Wasim Jaffer) ತನ್ನ ಯುಟ್ಯೂಬ್ ಚಾನಲ್ನಲ್ಲಿ, ಕೊಹ್ಲಿ ಹ್ಯಾಂಡ್ಶೇಕ್ ನೀಡದ ವರ್ತನೆಯನ್ನು ಟೀಕಿಸಿದ್ದಾರೆ. "ಕ್ರಿಕೆಟ್ ಆಟದ ರಾಯಭಾರಿಯಂತಿರುವ ಕೊಹ್ಲಿ ಆ ವಿಷಯವನ್ನು ಮೈದಾನದಲ್ಲೇ ಬಿಡಬೇಕಾಗಿತ್ತು. ಹೆಡ್ಗೆ ಹಸ್ತಲಾವ ನೀಡಿ ಮುಂದಕ್ಕೆ ಹೋಗಬೇಕಾಗಿತ್ತು. ಅವರಂಥ ದೊಡ್ಡ ಆಟಗಾರ ಈ ರೀತಿ ವರ್ತಿಸುವುದು ಸರಿಯಲ್ಲ' ಎಂದು ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಐಪಿಎಲ್ ಪಂದ್ಯದ ವೇಳೆ ಭಾರತೀಯ ಕ್ರಿಕೆಟ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಜತೆ ತನ್ನ ಪತಿ ಜಗಳವಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತನಗೆ ನಿಂದನೆಯ ಕಾಮೆಂಟ್ಗಳು ಬರುತ್ತಿವೆ ಎಂದು ಆಸ್ಟ್ರೆಲಿಯಾದ ಕ್ರಿಕೆಟರ್ ಟ್ರಾವಿಸ್ ಹೆಡ್ (Travis Head) ಅವರ ಪತ್ನಿ ಜೆಸ್ಸಿಕಾ (Jessica) ಸೋಮವಾರ ಅಳಲು ತೋಡಿಕೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟ್ರಾವಿಸ್ ಹೆಡ್ ಶತಕದ ಬಲದಿಂದ ಆಸ್ಟ್ರೆಲಿಯಾ ತಂಡ ಭಾರತವನ್ನು ಸೋಲಿಸಿ ಪ್ರಶಸ್ತಿ ಗೆದ್ದ ಬಳಿಕವೂ ಜೆಸ್ಸಿಕಾ ಇದೇ ರೀತಿಯ ನಿಂದನೆ ಎದುರಿಸಿದ್ದರು. "ಸಾಮಾಜಿಕ ಜಾಲತಾಣದ ನಿಂದನೆಯೊಂದಿಗೆ ನನಗೆ ಬೆಳಗ್ಗೆ ಎಚ್ಚರಿಕೆಯಾಯಿತು' ಎಂದಿರುವ ಅವರು, ತನ್ನ ಗೆಳೆಯರು, ಕುಟುಂಬ ಕೂಡ ಇದೇ ರೀತಿ ನಿಂದನೆಗೆ ಗುರಿಯಾಗಿದೆ ಎಂದಿದ್ದಾರೆ.