ಶೇನ್​ ವಾರ್ನ್​ ಸಾವಿಗೆ ಕೋವಿಡ್​ ವ್ಯಾಕ್ಸಿನ್​ ಕಾರಣ: ಪುತ್ರ ಜಾಕ್ಸನ್​ ಆರೋಪ

ಶೇನ್​ ವಾರ್ನ್​ ಸಾವಿಗೆ ಕೋವಿಡ್​ ವ್ಯಾಕ್ಸಿನ್​ ಕಾರಣ: ಪುತ್ರ ಜಾಕ್ಸನ್​ ಆರೋಪ
ಶೇನ್​ ವಾರ್ನ್​ ಸಾವಿಗೆ ಕೋವಿಡ್​ ವ್ಯಾಕ್ಸಿನ್​ ಕಾರಣ: ಪುತ್ರ ಜಾಕ್ಸನ್​ ಆರೋಪ
Published on
ಸಿಡ್ನಿ: ಆಸ್ಟ್ರೆಲಿಯಾದ ಸ್ಪಿನ್​ ದಿಗ್ಗಜ ಶೇನ್​ ವಾರ್ನ್​ಗೆ (Shane Warne) ಬಲವಂತವಾಗಿ ಕೋವಿಡ್​ ಲಸಿಕೆ (COVID vaccine) ನೀಡಿದ್ದೇ ಅವರ ಅಕಾಲಿಕ ಸಾವಿಗೆ ಕಾರಣ ಎಂದು ಅವರ ಪುತ್ರ ಜಾಕ್ಸನ್​ ಆರೋಪಿಸಿದ್ದಾರೆ. ವಾರ್ನ್​ ಆರೋಗ್ಯ ಕೆಲ ಸಮಸ್ಯೆಯನ್ನೂ ಹೊಂದಿದ್ದರು. ಹೀಗಾಗಿ ಅವರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರು. ಆದರೆ ಬಲವಂತವಾಗಿಯೇ ಅವರಿಗೆ ಲಸಿಕೆಯ 3-4 ಡೋಸ್​ಗಳನ್ನು ನೀಡಲಾಗಿತ್ತು ಎಂದು ಜಾಕ್ಸನ್​ ಪಾಡ್​ಕಾಸ್ಟ್​ ಒಂದರಲ್ಲಿ ಹೇಳಿದ್ದಾರೆ.

ವಾರ್ನ್​ ಸಾವಿನ 4 ವರ್ಷಗಳ ಈ ಆರೋಪ ಕೇಳಿಬಂದಿದೆ. ವಾರ್ನ್​ 2022ರಲ್ಲಿ ಥಾಯ್ಲೆಂಡ್​ ಪ್ರವಾಸಕ್ಕೆ ಹೋಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಧೂಮಪಾನ ಮತ್ತು ಕುಡಿತದ ಅಭ್ಯಾಸ ಹೊಂದಿದ್ದ ಹೊರತಾಗಿಯೂ ತನ್ನ ತಂದೆ ಆರೋಗ್ಯವಾಗಿಯೇ ಇದ್ದರು ಎಂದೂ ಜಾಕ್ಸನ್​ ತಿಳಿಸಿದ್ದಾರೆ.

ವಾರ್ನ್​ ಸಾವಿಗೆ ಕೆಲವೇ ತಿಂಗಳ ಮುನ್ನ ಕರೋನಾ ಸೋಂಕಿಗೂ ತುತ್ತಾಗಿದ್ದರು. ಆದರೆ ಸಾವಿನ ಸಮಯದಲ್ಲಿ ಅವರಿಗೆ ಯಾವುದೇ ಪ್ರಮುಖ ಕಾಯಿಲೆಗಳು ಇರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net