WPL: ಮಹಿಳಾ ಐಪಿಎಲ್ನಲ್ಲಿ ಮೊದಲ ಶತಕ ಯಾವಾಗ? 90ರ ಗಡಿ ದಾಟಿದರೂ ಒಲಿಯುತ್ತಿಲ್ಲ ಸೆಂಚುರಿ!
ಮಹಿಳಾ ಐಪಿಎಲ್ನಲ್ಲಿ ಮೊದಲ ಶತಕ ಯಾವಾಗ?
Published on:
Copied
Follow Us
ಮುಂಬೈ: ಐಪಿಎಲ್ನಲ್ಲಿ (IPL) ಮೊದಲ ಪಂದ್ಯದಲ್ಲೇ ಶತಕ ಸಿಡಿದಿತ್ತು. 2008ರಲ್ಲಿ ಆರ್ಸಿಬಿ ವಿರುದ್ಧ ನಡೆದ ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲೇ ಕೆಕೆಆರ್ ಪರ ನ್ಯೂಜಿಲೆಂಡ್ನ ಬ್ರೆಂಡನ್ ಮೆಕ್ಕಲಂ 157 ರನ್ ಸಿಡಿಸಿ ಶತಕವೀರರೆನಿಸಿದ್ದರು. ಆದರೆ ಮಹಿಳಾ ಐಪಿಎಲ್ ಖ್ಯಾತಿಯ ಡಬ್ಲ್ಯುಪಿಎಲ್ನಲ್ಲಿ (WPL) ಮೊದಲ 3 ಆವೃತ್ತಿಗಳಲ್ಲಿ ಒಂದೂ ಶತಕ ಸಿಡಿದಿರಲಿಲ್ಲ. ಇದೀಗ ಡಬ್ಲ್ಯುಪಿಎಲ್ ನಾಲ್ಕನೇ ಆವೃತ್ತಿಯಲ್ಲೂ ಅರ್ಧದಷ್ಟು ಪಂದ್ಯಗಳು ಮುಗಿದಿದ್ದರೂ, ಇದುವರೆಗೆ ಒಂದೂ ಶತಕ ದಾಖಲಾಗಿಲ್ಲ.
ಡಬ್ಲ್ಯುಪಿಎಲ್ನಲ್ಲಿ ಇದುವರೆಗೆ 10 ಆಟಗಾರ್ತಿಯರು 90ರ ಗಡಿ ದಾಟಿದ್ದರೂ, ಶತಕ ಪೂರೈಸುವಲ್ಲಿ ಯಶಸ್ವಿಯಾಗಿಲ್ಲ. ಶನಿವಾರ ಡೆಲ್ಲಿ ಎದುರು 96 ರನ್ಗಳಿಗೆ ಔಟಾದ ಸ್ಮೃತಿ ಮಂದನಾ (Smriti Mandhana) ಇದಕ್ಕೊಂದು ತಾಜಾ ಉದಾಹರಣೆ.
ಇಬ್ಬರು ಆಟಗಾರ್ತಿಯರು 99 ರನ್ (ವೊಲ್, ಡಿವೈನ್) ಗಳಿಸಿದ್ದರೂ, ಶತಕ ಒಲಿದಿರಲಿಲ್ಲ. ಸೋಫಿ ಡಿವೈನ್ 2 ಬಾರಿ 90ರ ಗಡಿ ದಾಟಿದ್ದರೂ, ಶತಕ ಗಳಿಸಿಲ್ಲ. ಹೀಗಾಗಿ ಡಬ್ಲ್ಯುಪಿಎಲ್ ಇತಿಹಾಸದ ಮೊದಲ ಶತಕ ಸಾಧಕಿ ಯಾರಾಗುವರು ಎಂಬ ಕುತೂಹಲ ತೀವ್ರಗೊಂಡಿದೆ.