ಮೊದಲು ಬ್ಯಾಟಿಂಗ್ಗೆ ಇಳಿದ ಸ್ವಸ್ತಿಕ್ ಯೂನಿಯನ್ ತಂಡ ಅನೀಶ್ವರ್ ಗೌತಮ್ (156) ಶತಕದಾಟದಿಂದ 50 ಓವರ್ಗಳಲ್ಲಿ 7 ವಿಕೆಟ್ಗೆ 307 ರನ್ ಗಳಿಸಿತು. ಪ್ರತಿಯಾಗಿ ವಲ್ಚರ್ಸ್ ಚೇಸಿಂಗ್ ವೇಳೆ ಮಳೆ ಅಡಚಣೆ ತಂದಿದ್ದರಿಂದ 39 ಓವರ್ಗಳಲ್ಲಿ 263 ರನ್ ಗಳಿಸುವ ಪರಿಷತ ಸವಾಲು ನೀಡಲಾಯಿತು. ಕರುಣ್ ನಾಯರ್ (69), ಶ್ರೀಜಿತ್ (54*) ಅರ್ಧಶತಕದ ಬಲದಿಂದ ವಲ್ಚರ್ಸ್ ತಂಡ 25.5 ಓವರ್ಗಳಲ್ಲಿ 2 ವಿಕೆಟ್ಗೆ 152 ರನ್ ಗಳಿಸಿದಾಗ ಮಳೆ ಮತ್ತೆ ಅಡಚಣೆ ತಂದಿತು. ನಂತರ ಆಟ ಮುಂದುವರಿಸಲು ಸಾಧ್ಯವಾಗದೆ ವಿಜೆಡಿ ನಿಯಮದನ್ವಯ ಫಲಿತಾಂಶ ನಿರ್ಧರಿಸಲಾಯಿತು.