ಅರ್ಜಿಯಲ್ಲಿ ವಿರಾಟ್ ಕೊಹ್ಲಿ ಅವರ ಪೂರ್ಣ ಹೆಸರು, ತಂದೆಯ ಹೆಸರು ಪ್ರೇಮ್ ಕೊಹ್ಲಿ, ಅವರ ಅಂದಿನ ದೂರವಾಣಿ ಸಂಖ್ಯೆ ಹಾಗೂ ದೆಹಲಿಯ ಉತ್ತಮ್ ನಗರದಲ್ಲಿರುವ ಅವರ ಮನೆಯ ವಿಳಾಸವನ್ನು ಕೈಬರಹದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ, ಅಕಾಡೆಮಿಯ ಕೋಚ್ ಆದ ರಾಜ್‌ಕುಮಾರ್ ಶರ್ಮಾ ಅವರ ಸಹಿ ಕೂಡ ಈ ಫಾರ್ಮ್ ಮೇಲಿದೆ. ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಬದುಕಿನ ಮೊದಲ ಹೆಜ್ಜೆಯ ಸಾಕ್ಷಿ ಇದಾಗಿದ್ದು, ಅಭಿಮಾನಿಗಳು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿ ಹಂಚಿಕೊಳ್ಳುತ್ತಿದ್ದಾರೆ.