ಜನೆವರಿ 29ರಂದು ಬಿಡುಗಡೆಯಾದ 'ಬ್ರೇಕಿಂಗ್ ಸ್ಪೋರ್ಟ್ಸ್ ವಿತ್ ವಿವೇಕ್ ಸೇಥಿಯಾ' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮುನಾಫ್ ಪಟೇಲ್, "ವಿರಾಟ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾಧಿಸಬೇಕಾದದ್ದನ್ನೆಲ್ಲ ಸಾಧಿಸಿದ್ದಾರೆ. 100ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳು, ಅದ್ಭುತ ನಾಯಕತ್ವ, ವಿದೇಶಿ ನೆಲದಲ್ಲಿ ಐತಿಹಾಸಿಕ ಜಯಗಳು - ಹೀಗೆ ಪಟ್ಟಿಯೇ ದೊಡ್ಡದಿದೆ. ಹತ್ತು ಸಾವಿರ ರನ್‌ಗಳ ಲೆಕ್ಕಾಚಾರಕ್ಕಿಂತ ಅವರ ಪ್ರಭಾವ ದೊಡ್ಡದಿದೆ. ನಿವೃತ್ತಿ ಎಂಬುದು ಅವರ ಸ್ವಂತ ನಿರ್ಧಾರ, ಹಾಗಾಗಿ ಅವರು ಮರಳಿ ಬರುತ್ತಾರೆ ಎಂದು ನನಗನ್ನಿಸುವುದಿಲ್ಲ," ಎಂದು ಹೇಳಿದ್ದಾರೆ.