ವಿರಾಟ್​ ಕೊಹ್ಲಿ-ಗೌತಮ್​ ಗಂಭೀರ್​ ನಡುವೆ ಎಲ್ಲವೂ ಸರಿಯಿಲ್ಲ: ಮತ್ತೊಂದು ವಿಡಿಯೋ ವೈರಲ್​! Virat Kohli vs Gautam Gambhir

ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟ್ಸಮನ್​ ವಿರಾಟ್​ ಕೊಹ್ಲಿ ಹಾಗೂ ಮುಖ್ಯ ಕೋಚ್​ ಗೌತಮ್​ ಗಂಭೀರ್​
ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟ್ಸಮನ್​ ವಿರಾಟ್​ ಕೊಹ್ಲಿ ಹಾಗೂ ಮುಖ್ಯ ಕೋಚ್​ ಗೌತಮ್​ ಗಂಭೀರ್​
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯ ಕೋಚ್​ ಗೌತಮ್​ ಗಂಭೀರ್​ ಮತ್ತು ವಿರಾಟ್​ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ
  • ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಮತ್ತೊಂದು ವಿಡಿಯೋದಿಂದ ಎಲ್ಲವು ಸ್ಪಷ್ಟ
  • ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಅಪ್ಪಿಕೊಳ್ಳುವಾಗ ಕೊಹ್ಲಿ ಮುಖದಲ್ಲಿ ಕಾಣದ ಉತ್ಸಾಹ
Virat Kohli vs Gautam Gambhir : ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಟೀಮ್​ ಇಂಡಿಯಾ 2-1 ಅಂತರದಿಂದ ಗೆದ್ದುಕೊಂಡಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಸರಣಿಯ ಅಂತಿಮ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ ಅವರು ನಡೆದುಕೊಂಡ ರೀತಿಯನ್ನು ಗಮನಿಸಿದರೆ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಮತ್ತು ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.
ಮೂರು ಪಂದ್ಯಗಳ ಏಕದಿನ ಸರಣಿಯುದ್ದಕ್ಕೂ ಉತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ (302 ರನ್‌ಗಳು, 2 ಶತಕಗಳು), ಪಂದ್ಯದ ನಂತರ ತಮ್ಮ ತಂಡದ ಎಲ್ಲ ಸದಸ್ಯರನ್ನು ಉತ್ಸಾಹದಿಂದ ತಬ್ಬಿಕೊಂಡರು. ಮಾಜಿ ನಾಯಕ ರೋಹಿತ್ ಶರ್ಮ ಅವರನ್ನೂ ಕೊಹ್ಲಿ ಖುಷಿಯಿಂದಲೇ ಅಪ್ಪಿಕೊಂಡರು. ಆದರೆ, ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಅಪ್ಪಿಕೊಳ್ಳುವಾಗ ಆ ಉತ್ಸಾಹ ಕಾಣಲಿಲ್ಲ.
ಹೇಳಬೇಕೆಂದರೆ, ಕೊಹ್ಲಿ ಅವರು ಗಂಭೀರ್ ಅವರನ್ನು ತಬ್ಬಿಕೊಳ್ಳಲೇ ಇಲ್ಲ. ಬದಲಿಗೆ ಅವರಿಗೆ ಹ್ಯಾಂಡ್‌ಶೇಕ್ ಮಾತ್ರ ನೀಡಿದರು. ಈ ಸಂದರ್ಭದಲ್ಲಿ ಕಿಂಗ್ ಕೊಹ್ಲಿ ಅವರ ಮುಖಭಾವವನ್ನು ನೋಡಿ, ಅಭಿಮಾನಿಗಳು ಇಬ್ಬರ ನಡುವೆ ಮತ್ತೆ ಬಿರುಕು ಉಂಟಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇದು ನಿಜ ಕೂಡ ಹೌದು.
ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವಿನ ಸಂಬಂಧವು ಕೆಲವು ಸಮಯದಿಂದ ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲ ಎಂದು ಹಲವಾರು ವರದಿಗಳು ಸೂಚಿಸಿವೆ. ರೋಹಿತ್​, ಕೊಹ್ಲಿ ಹಾಗೂ ಗಂಭೀರ್​ ಜತೆ ಬಿಸಿಸಿಐ ಸಭೆ ನಡೆಸಿದ ಅಂತಾನೂ ಈ ಹಿಂದೆ ವರದಿ ಬಂದಿದೆ.
ಇನ್ನು ಕೊಹ್ಲಿ ಮತ್ತು ಗಂಭೀರ್​ ಈ ಹಿಂದೆ ಐಪಿಎಲ್‌ನಲ್ಲಿ ಬಹಿರಂಗವಾಗಿಯೇ ಜಗಳವಾಡಿರುವುದು ಎಲ್ಲರಿಗೂ ಗೊತ್ತಿದೆ. ಇದೀಗ ತಂಡದ ಗೆಲುವಿನ ನಂತರ ವಿರಾಟ್ ಕೊಹ್ಲಿ ತೋರಿದ ವರ್ತನೆ ಡ್ರೆಸ್ಸಿಂಗ್ ಕೋಣೆಯಲ್ಲಿ ಆಂತರಿಕ ಸಂಘರ್ಷಗಳು ಮುಂದುವರೆದಿವೆ ಎಂಬ ಊಹಾಪೋಹವನ್ನು ಮತ್ತಷ್ಟು ಬಲಪಡಿಸಿದೆ.
ಇನ್ನು ಜನವರಿ 11 ರಂದು ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಶರ್ಮ ಮತ್ತೆ ಮೈದಾನಕ್ಕೆ ಇಳಿಯಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net