ನವದೆಹಲಿ: ಭಾರತದ 19 ವಯೋಮಿತಿ ಮತ್ತು ಪಂಜಾಬ್ ತಂಡದ ಮಾಜಿ ವೇಗಿ ಅಮನ್ಪ್ರೀತ್ ಸಿಂಗ್ ಗಿಲ್ (36 ವರ್ಷ) ಬುಧವಾರ ನಿಧನರಾದರು. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
19 ವಯೋಮಿತಿ ಕ್ರಿಕೆಟ್ನಲ್ಲಿ ಅವರು 2007ರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಜತೆ ಆಡಿದ್ದರು. ಆದರೆ 2008ರಲ್ಲಿ ಕೊಹ್ಲಿ ನಾಯಕತ್ವದಲ್ಲಿ ಕಿರಿಯರ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಮಾತ್ರ ಸ್ಥಾನ ವಂಚಿತರಾಗಿದ್ದರು.
ಚೊಚ್ಚಲ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ (ಆಗ ಕಿಂಗ್ಸ್ ಇಲೆವೆನ್ ಪಂಜಾಬ್) ತಂಡದ ಭಾಗವಾಗಿದ್ದರು. ಪಂಜಾಬ್ ಪರ 6 ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿ 11 ವಿಕೆಟ್ ಕಬಳಿಸಿದ್ದ ಅವರು ನಿವೃತ್ತಿಯ ಬಳಿಕ ಪಂಜಾಬ್ನ ಆಯ್ಕೆಗಾರರೂ ಆಗಿದ್ದರು. ಅಮನ್ಪ್ರೀತ್ ನಿಧನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿರುವ ಕೊಹ್ಲಿ, "ಅಮನ್ಪ್ರೀತ್ ನಿಧನ ಆಘಾತ ಮತ್ತು ದುಃಖ ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ.