ಐಪಿಎಲ್​ ನಡುವೆ ಲಂಡನ್​ಗೆ ತೆರಳಲು ಬಾಡಿಗೆ ವಿಮಾನ ಕೇಳಿಲ್ಲ, ಕೊಹ್ಲಿ ಸ್ಪಷ್ಟನೆ

ಐಪಿಎಲ್​ ನಡುವೆ ಲಂಡನ್​ಗೆ ತೆರಳಲು ಬಾಡಿಗೆ ವಿಮಾನ ಕೇಳಿಲ್ಲ, ಕೊಹ್ಲಿ ಸ್ಪಷ್ಟನೆ
ಐಪಿಎಲ್​ ನಡುವೆ ಲಂಡನ್​ಗೆ ತೆರಳಲು ಬಾಡಿಗೆ ವಿಮಾನ ಕೇಳಿಲ್ಲ, ಕೊಹ್ಲಿ ಸ್ಪಷ್ಟನೆ
Published on
ಬೆಂಗಳೂರು: ಸದ್ಯ ಬ್ರಿಟನ್​ ನಿವಾಸಿಯಾಗಿರುವ ಭಾರತದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ (virat kohli), ಐಪಿಎಲ್​ (IPL) ಟೂರ್ನಿಯ ನಡುವೆ 3ಕ್ಕಿಂತ ಹೆಚ್ಚಿನ ದಿನಗಳ ಬಿಡುವು ಸಿಕ್ಕಾಗ ಲಂಡನ್​ಗೆ ತೆರಳಿ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸಿದ್ದಾರೆ. ಇದಕ್ಕಾಗಿ ವಿಶೇಷ ಬಾಡಿಗೆ ವಿಮಾನದ ವ್ಯವಸ್ಥೆ ಮಾಡಿಕೊಡುವಂತೆ ಆರ್​ಸಿಬಿ ತಂಡವನ್ನು ಕೇಳಿಕೊಂಡಿದ್ದಾರೆ ಎಂದು ಇತ್ತೀಚೆಗೆ ವರದಿ ಹರಡಿತ್ತು. ಇದಕ್ಕೆ ಭಾನುವಾರ ಪ್ರತಿಕ್ರಿಯಿಸಿರುವ ಕೊಹ್ಲಿ, ಈ ರೀತಿಯ ಬೇಡಿಕೆ ಇಟ್ಟಿರುವುದನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಈ ವರದಿಯ ಚಿತ್ರದೊಂದಿಗೆ ಕೊಹ್ಲಿ, ನಗುವಿನ ಇಮೋಜಿಯನ್ನು ಪೋಸ್ಟ್​ ಮಾಡಿದ್ದಾರೆ. ಈ ಮೂಲಕ ವರದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net