ಅವನೀತ್ ಕೌರ್ ಅವರ ಇನ್‌ಸ್ಟಾಗ್ರಾಮ್ ಫೋಟೊವನ್ನು ಲೈಕ್ ಮಾಡಿದ್ದ ವಿರಾಟ್, ಸ್ಪಷ್ಟನೆ ವೇಳೆ ಇದೊಂದು ಅಲ್ಗಾರಿದಮ್ ಮಿಸ್ಟೇಕ್ ಬಿಟ್ಟರೆ, ನಾನಾಗಿ ಲೈಕ್ ಮಾಡಿರುವುದಲ್ಲ ಎಂದಿದ್ದರು. ಆದರೀಗ, ಜರ್ಮನಿ ಮೂಲದ ವ್ಲಾಗರ್ ಲಿಜ್‌ಲಾಜ್ ಎಂಬ ಯುವತಿಯ ಫೋಟೋಗೆ ಜನವರಿಯಲ್ಲಿ ವಿರಾಟ್ ಅವರ ಇನ್ಸ್ಟಾ ಖಾತೆಯಿಂದ ಲೈಕ್ ಆಗಿರುವುದು ಗೊತ್ತಾಗಿದೆ. ಇದನ್ನು ನೋಡಿದ ವಿರಾಟ್ ಅಭಿಮಾನಿಗಳು, ಕಳೆದ ಬಾರಿ ಏನೋ ಅಲ್ಗಾರಿದಮ್ ಅಂತ ಹೇಳಿದ್ರು. ಆದರೆ, ಎರಡನೇ ಬಾರಿ ಅದೇ ರೀತಿ ಆಗಿರುವುದಕ್ಕೆ ಏನು ಹೇಳ್ತಾರೆ ಕೊಹ್ಲಿ ಎಂಬ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿವೆ.