ಲಂಡನ್ ಭೇಟಿಯ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ ಕಾಕ್ಸ್, ನಾವಿಬ್ಬರೂ ಭೇಟಿಯನ್ನು ಬಹಳ ರಹಸ್ಯವಾಗಿಡಲು ಪ್ರಯತ್ನಿಸಿದರೂ, ಯಾರೋ ನಮ್ಮಿಬ್ಬರ ಫೋಟೋಗಳನ್ನು ಕ್ಲಿಕ್ಕಿಸಿ, ಅದನ್ನು 2 ಗಂಟೆಯೊಳಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ವಿರಾಟ್‌ರ ಅರಿವಿಗೆ ಬಾರದಂತೆ ಕೆಲವರು ಅವರನ್ನು ಹಿಂಬಾಲಿಸಿದ್ದು ನಿಜಕ್ಕೂ ಬೇಸರದ ಸಂಗತಿ. ನಾವು ಲಂಡನ್‌ನ ಬೀದಿಯಲ್ಲಿ ಕುಳಿತಿದ್ದಾಗ, ನೂರಾರು ಜನರು ನಮ್ಮ ಮುಂದೆಯೇ ಓಡಾಡುತ್ತಿದ್ದರು. ಆದರೆ, ಯಾರೊಬ್ಬರು ಕೂಡ ತಡೆದು ನಿಲ್ಲಿಸಲಿಲ್ಲ ಅಥವಾ ಮಾತನಾಡಿಸಲು ಮುಂದಾಗಲಿಲ್ಲ. ಹೀಗಿರುವಾಗ, ವೈರಲ್ ಹೇಗಾಯ್ತು ಎಂಬುದೇ ಆಶ್ಚರ್ಯ ಎಂದರು.