ಹೌದು, ಎಲ್ಎಸ್ಜಿ ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಕೊಹ್ಲಿ, ತಮ್ಮ ಕಾಲಿಗೆ ಬ್ಯಾಂಡೇಜ್ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಅಭ್ಯಾಸದ ಸಮಯದಲ್ಲಿ ಕೊಹ್ಲಿ ಎಡಗಾಲಿಗೆ ಬ್ಯಾಂಡೇಜ್ ಧರಿಸಿರುವುದು ಕಂಡುಬಂದಿದೆ. ಅಭ್ಯಾಸದ ನಂತರ, ಕೊಹ್ಲಿ ಅವರು ಎಲ್ಎಸ್ಜಿ ನಾಯಕ ರಿಷಭ್ ಪಂತ್ ಮತ್ತು ಸಹಾಯಕ ಸಿಬ್ಬಂದಿಗಳಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್ ಅವರನ್ನು ಅಪ್ಪಿಕೊಂಡರು. ಇದರ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದವರಿಗೆ ಇಂದು ಕೊಹ್ಲಿ ಆಡುತ್ತಾರಾ? ಇಲ್ಲವಾ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ, ಇಂದಿನ ಪಂದ್ಯ ಆರಂಭವಾಗುವವೆಗೂ ಕಾಯಬೇಕಾಗುತ್ತದೆ.