ಕಾಂಬ್ಳಿಗೆ ಸಹಾಯ ಮಾಡುವ ಭರವಸೆಯಲ್ಲಿ ವಾಟ್ಸಾಪ್ ಗ್ರೂಪ್ವೊಂದನ್ನು ರಚಿಸಿದ್ದೇನೆ. ಅಲ್ಲಿ ಹೆಸರುಗಳನ್ನು ಹೇಳದೆಯೇ ಬಹಳಷ್ಟು ಜನರು ಆರ್ಥಿಕ ಸಹಾಯವನ್ನು ಮಾಡಿದ್ದಾರೆ. ಆತನ ಸ್ಮರಣಶಕ್ತಿ ಚೆನ್ನಾಗಿಲ್ಲ, ಯಾವುದು ಸರಿಯಾಗಿ ನೆನಪಿಲ್ಲ. ಯಾವುದಾದರೂ ವಿಷಯದ ಬಗ್ಗೆ ನೆನಪಿಸಿದಾಗ ಮಾತ್ರ ನೆನಪಾಗುತ್ತದೆ ಇಲ್ಲದಿದ್ದರೆ ಅವರಿಗೆ ಕಷ್ಟವಾಗುತ್ತದೆ ಎಂದು ಸುದ್ದಿ ಮೂಲಗಳಿಗೆ ತಿಳಿಸಿದ್ದರು.