ಇನ್ನೊಂದೆಡೆ ವಿಜಯ್ ಹಜಾರೆ ಟ್ರೋಫಿಯ ಭಾಗವಾಗಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಆಡುತ್ತಿರುವ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅರ್ಧಶತಕ ಪೂರೈಸಿದ್ದಾರೆ. 61 ಎಸೆತಗಳಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 77 ರನ್ ಗಳಿಸಿದರು. ಕೊಹ್ಲಿ ಔಟಾದ ನಂತರ, ದೆಹಲಿ ನಾಯಕ ರಿಷಭ್ ಪಂತ್ ಕೂಡ ಆಕ್ರಮಣಕಾರಿ ಆಟವಾಡಿದ್ದಾರೆ. ಪಂತ್ ಅವರು 79 ಎಸೆತಗಳಲ್ಲಿ 70 ರನ್ ಗಳಿಸಿ ಔಟಾಗಿದ್ದು, ದೆಹಲಿ ತಂಡ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿದೆ, (ಏಜೆನ್ಸೀಸ್).