ಭಾರತೀಯ ತಂಡಕ್ಕಾಗಿ ಆಡುವ ತಮ್ಮ ಕನಸನ್ನು ಮುಂದುವರಿಸಲು ತಮ್ಮ ಕೆಲಸವನ್ನು ತ್ಯಜಿಸಲು ವರುಣ್ ಬಯಸಿದರು. ತಮ್ಮ ಆ ಪರಿಸ್ಥಿತಿಯನ್ನು ನೇಹಾಗೆ ವಿವರಿಸಿದರು. ನನಗೆ ಕೆಲಸವಿಲ್ಲ, ಭವಿಷ್ಯ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ, ನನ್ನನ್ನು ನಂಬಬೇಡಿ ಎಂದು ವರುಣ್, ನೇಹಾಗೆ ಹೇಳಿದರು. ಆ ಸಮಯದಲ್ಲಿ, ಅವರ ಪತ್ನಿ ನೇಹಾ ನೀಡಿದ ಉತ್ತರ ವರುಣ್ ಅವರ ಜೀವನವನ್ನೇ ಬದಲಾಯಿಸಿತು.