ಮೈದಾನದ ನಾನಾ ಮೂಲೆಗಳಿಗೆ ಭರ್ಜರಿ ಬೌಂಡರಿಗಳ ಸುರಿಮಳೆ ಗೈದ ವೈಭವ್ ಸೂರ್ಯವಂಶಿ, ಕೇವಲ 31 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆ ಬಳಿಕವೂ ತಮ್ಮ ಸ್ಫೋಟಕ ಆಟ ಮುಂದುವರಿಸಿದ ಅವರು, ಬರೋಬ್ಬರಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 49 ಎಸೆತಗಳಲ್ಲಿ 81 ರನ್ ಸಿಡಿಸಿ ರಂಜಿಸಿದರು. ಅಂತಿಮವಾಗಿ ಬೌಂಡರಿ ಲೈನ್ ಬಳಿ ಬ್ರ್ಯಾಡ್ ಇವಾನ್ಸ್ ಪಡೆದ ಅದ್ಭುತ ಕ್ಯಾಚ್‌ಗೆ ಬಲಿಯಾಗುವ ಮೂಲಕ ವೈಭವ್ ಅವರ ಮನಮೋಹಕ ಇನಿಂಗ್ಸ್‌ಗೆ ತೆರೆಬಿದ್ದಿತು.