ಅಂಡರ್​-19 ಫೈನಲ್​ನಲ್ಲಿ 'ಬೇಬಿ ಬಾಸ್' ದಾಖಲೆಗಳ​ ಅಬ್ಬರ! ಸ್ಫೋಟಕ ಶತಕ ಬೆನ್ನಲ್ಲೇ ಹಲವು ರೆಕಾರ್ಡ್​ ಉಡೀಸ್ | Vaibhav Suryavanshi

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಅಂಡರ್​-19 ವಿಶ್ವಕಪ್ ಫೈನಲ್‌ನಲ್ಲಿ ವೈಭವ್ ಸೂರ್ಯವಂಶಿ ಅವರಿಂದ ಅಮೋಘ ಇನ್ನಿಂಗ್ಸ್
  • 14 ವರ್ಷದ ಆರಂಭಿಕ ಬ್ಯಾಟರ್​ನ ಅಬ್ಬರದ ಇನ್ನಿಂಗ್ಸ್​ಗೆ ಕ್ರಿಕೆಟ್​ ಲೋಕ ಫಿದಾ (80 ಎಸೆತಗಳಲ್ಲಿ 175 ರನ್)
  • ಒಂದೇ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌ ಮತ್ತು 15 ಬೌಂಡರಿ
  • ಅಂಡರ್-19 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಅತಿ ವೇಗದ ಶತಕವಿದು
ನವದೆಹಲಿ: ಐಪಿಎಲ್​ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಸ್ಫೋಟಕ ಓಪನಿಂಗ್ ಬ್ಯಾಟರ್​ ಆಗಿ ಕಣಕ್ಕಿಳಿಯುತ್ತಿದ್ದ ಟೀಮ್ ಇಂಡಿಯಾ ಯುವ ಆಟಗಾರ ಯುವ ಆಟಗಾರ ವೈಭವ್​ ಸೂರ್ಯವಂಶಿ (Vaibhav Sooryavanshi), ಕೇವಲ 14ನೇ ವಯಸ್ಸಿಗೆ ತಮ್ಮ ಅಬ್ಬರದ ಬ್ಯಾಟಿಂಗ್ ಶೈಲಿಯಿಂದ ಇಡೀ ಕ್ರಿಕೆಟ್​ ಲೋಕವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಈಗ ಮತ್ತೊಮ್ಮೆ ಅದೇ ರೀತಿ ಮಾಡಿರುವುದು ಗಮನಾರ್ಹ.
ಇಂದು (ಫೆ.06) ಹರಾರೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ವೈಭವ್ ಭರ್ಜರಿ ಶತಕ ಸಿಡಿಸಿದ್ದಾರೆ. ಫೈನಲ್​ ಪಂದ್ಯದಲ್ಲಿ, ಸೂರ್ಯವಂಶಿ ಅವರು ರಾಲ್ಫಿ ಆಲ್ಬರ್ಟ್ ಬೌಲಿಂಗ್‌ನಲ್ಲಿ ಸಿಂಗಲ್ ಗಳಿಸುವ ಮೂಲಕ ಕೇವಲ 55 ಎಸೆತಗಳಲ್ಲಿ ಶತಕ ಬಾರಿಸಿದರು. ಈ ಮೂಲಕ, ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗವಾಗಿ ಸೆಂಚುರಿ ದಾಖಲಿಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೇವಲ ಸ್ಫೋಟಕ ಶತಕಕ್ಕೆ ಮಾತ್ರ ಸುಮ್ಮನಾಗದ 'ಬೇಬಿ ಬಾಸ್'​, ಕ್ರಿಕೆಟ್​ ಪ್ರಿಯರು ಸ್ಟೇಡಿಯಂನಲ್ಲಿ ಕುಣಿದು ಕುಪ್ಪಳಿಸುವಂತ ಇನ್ನಿಂಗ್ಸ್ ಆಡಿದ್ದು ವಿಶೇಷ. ಕೇವಲ 80 ಎಸೆತಗಳಲ್ಲಿ 15 ಸಿಕ್ಸರ್​ ಮತ್ತು 15 ಬೌಂಡರಿ ನೆರವಿನಿಂದ 175 ರನ್​ ಕಲೆಹಾಕಿದ ಸೂರ್ಯವಂಶಿ, ಈ ಮೂಲಕ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ಭಾರತದ ಮೊದಲ ಆಟಗಾರನೆಂಬ ಹೆಗ್ಗಳಿಕೆಯ ಜತೆಗೆ ವಿಶ್ವದಲ್ಲಿ ಎರಡನೇ ಆಟಗಾರನೆಂಬ ದಾಖಲೆ ಬರೆದಿದ್ದಾರೆ. ಇದೊಂದು ಶತಕದ ಮೂಲಕ ವೈಭವ್​ ಹಲವಾರು ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ ಎಂಬುದು ಮತ್ತೊಂದು ವಿಶೇಷ.

ಯಾವೆಲ್ಲ ದಾಖಲೆ ಬ್ರೇಕ್​?

  • ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 150ಕ್ಕೂ ಅಧಿಕ ರನ್​ ಗಳಿಸಿದ ಮೊದಲ ಆಟಗಾರ
  • ಫೈನಲ್‌ನಲ್ಲಿ ಭಾರತೀಯ ಆಟಗಾರನಿಂದ ಬಂದ ಅತಿ ವೇಗದ ಶತಕ (55 ಎಸೆತ)
  • ಒಂದೇ ಇನ್ನಿಂಗ್ಸ್‌ನಲ್ಲಿ 15 ಸಿಕ್ಸರ್‌
  • ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿಗಳೊಂದಿಗೆ 150 ರನ್‌ (15 ಸಿಕ್ಸರ್‌, 15 ಬೌಂಡರಿ)
  • ಒಟ್ಟು 449 ರನ್‌ಗಳಿಂದ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್
  • ​ಇಡೀ ಟೂರ್ನಿಯಲ್ಲಿ 30 ಸಿಕ್ಸರ್‌ಗಳನ್ನು ಬಾರಿಸಿದ ಹೊಸ ದಾಖಲೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net