ದಂಬುಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇತ್ತೀಚೆಗಷ್ಟೇ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಆಟಗಾರ ಮತ್ತು ವೈಭವ್ ಮಧ್ಯೆ ಮಾತಿಗೆ ಮಾತು ಬೆಳೆದು, ಪರಸ್ಪರ ತಳ್ಳಾಟ ನಡೆಯಿತು. ಇದು ದೊಡ್ಡ ವಿವಾದಕ್ಕೂ ಕಾರಣವಾಯಿತು. 'ವಂಡರ್ ಕಿಡ್' ವೈಭವ್ರದ್ದೇ ಇಲ್ಲಿ ತಪ್ಪು ಎಂದಿರುವ ಅನೇಕರು, ಮೈದಾನದಲ್ಲಿ ಎದುರಾಳಿ ತಂಡದ ಆಟಗಾರನನ್ನು ನೂಕಿದ್ದು ಸರಿಯಲ್ಲ. ಕ್ರಿಕೆಟ್ನಲ್ಲಿ ಇಂತಹ ವರ್ತನೆಗಳು ಮೂಲ ನಿಯಮವನ್ನು ಉಲ್ಲಂಘಿಸಿದಂತೆ. ಹೀಗಾಗಿ, ವೈಭವ್ ವಿರುದ್ಧ ಏನು ಕ್ರಮ ಜರುಗಿಸಲಿದೆ? ಆತನನ್ನು ಮುಂದಿನ ಒಂದು ಮ್ಯಾಚ್ನಿಂದ ಬ್ಯಾನ್ ಮಾಡಲಿದ್ಯಾ ಅಥವಾ ಡಿಮೆರಿಟ್ ಪಾಯಿಂಟ್, ದಂಡ ವಿಧಿಸಲಿದೆಯೇ? ಎಂಬ ಪ್ರಶ್ನೆಗಳನ್ನು ಮುಂದಿಟ್ಟರು.