Vaibhav Sooryavanshi : ಕ್ರಿಕೆಟ್ ಅಂತ ಬಂದಾಗ ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಒಂದೇ ಒಂದು ಹೆಸರೆಂದರೆ ಅದು ವೈಭವ್ ಸೂರ್ಯವಂಶಿ. ಕೇವಲ 15 ವರ್ಷದ ಈ ಬಾಲಕ, ಭಾರತೀಯ ಕ್ರಿಕೆಟ್ನ ಭವಿಷ್ಯ ಎಂದರೆ ತಪ್ಪಾಗಲಾರದು. ಏಕೆಂದರೆ, ಈ ಕಿರಿಯ ವಯಸ್ಸಿನಲ್ಲೇ ಆತನ ಸಾಧನೆ ಅಗಾಧ. ತನ್ನ ಬಿರುಗಾಳಿಯ ಬ್ಯಾಟಿಂಗ್ನಿಂದಾಗಿ ರನ್ ಮಳೆಯನ್ನೇ ಹರಿಸುತ್ತಿರುವ ವೈಭವ್, ಜಸ್ಪ್ರೀತ್ ಬುಮ್ರಾ, ಜೋಶ್ ಹ್ಯಾಜಲ್ವುಡ್ ಹಾಗೂ ಭುವನೇಶ್ವರ್ ಕುಮಾರ್ ಅವರಂತಹ ವಿಶ್ವದರ್ಜೆಯ ಬೌಲರ್ಗಳನ್ನೇ ತಮ್ಮ ಸುನಾಮಿ ಬ್ಯಾಟಿಂಗ್ ಮೂಲಕ ಸಮರ್ಥವಾಗಿ ಎದುರಿಸಿದ್ದಾರೆ. ವೈಭವ್ ಕ್ರೀಸ್ನಲ್ಲಿ ಇದ್ದರೆ ಅವರಿಗೆ ಬೌಲಿಂಗ್ ಮಾಡಲು ಬೌಲರ್ಗಳು ಹೆದರುವಂತಾಗಿದೆ. ಹೀಗಿರುವಾಗ ವೈಭವ್ ಅವರ ಬ್ಯಾಟಿಂಗ್ನ ಸಣ್ಣ ದೌರ್ಬಲ್ಯವೊಂದು ಇದೀಗ ಹೆಚ್ಚು ಚರ್ಚೆಯಾಗುತ್ತಿದೆ.