ಅಂತೂ ಇಂತೂ ವೈಭವ್​ಗೆ ಕೂಡಿಬಂತು ಕಾಲ... ಬೇಬಿ ಬಾಸ್ ದಾಖಲೆ ಎಂಟ್ರಿ ಬಗ್ಗೆ ಹೊರಬಿತ್ತು ರೋಚಕ ಮಾಹಿತಿ! Vaibhav Sooryavanshi

ಅಂತೂ ಇಂತೂ ವೈಭವ್​ಗೆ ಕೂಡಿಬಂತು ಕಾಲ... ಬೇಬಿ ಬಾಸ್ ದಾಖಲೆ ಎಂಟ್ರಿ ಬಗ್ಗೆ ಹೊರಬಿತ್ತು ರೋಚಕ ಮಾಹಿತಿ! Vaibhav Sooryavanshi
ಅಂತೂ ಇಂತೂ ವೈಭವ್​ಗೆ ಕೂಡಿಬಂತು ಕಾಲ... ಬೇಬಿ ಬಾಸ್ ದಾಖಲೆ ಎಂಟ್ರಿ ಬಗ್ಗೆ ಹೊರಬಿತ್ತು ರೋಚಕ ಮಾಹಿತಿ! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಒಂದು ಸಂಚಲನಾತ್ಮಕ ಸುದ್ದಿಯೊಂದು ಹೊರಬಿದ್ದಿದೆ
  • ಐಪಿಎಲ್​ನಲ್ಲಿ ತಮ್ಮ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿರುವ ವೈಭವ್​
  • ರಾಜಸ್ಥಾನ ರಾಯಲ್ಸ್‌ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಟೀಮ್​ ಇಂಡಿಯಾಗೆ ಪಾದರ್ಪಣೆ
  • ಐರ್ಲೆಂಡ್ ಮತ್ತು ಜಿಂಬಾಬ್ವೆ ಟಿ20 ಸರಣಿಗಳಲ್ಲಿ ವೈಭರ್​ ಆಡುವುದು ಬಹುತೇಕ ಖಚಿತವಾಗಿದೆ
Vaibhav Sooryavanshi : ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದಂತೆ ಒಂದು ಸಂಚಲನಾತ್ಮಕ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ನಲ್ಲಿ ತಮ್ಮ ಬಿರುಗಾಳಿ ಬ್ಯಾಟಿಂಗ್​ ಮೂಲಕವೇ ಸಖತ್​ ಸದ್ದು ಮಾಡುತ್ತಿರುವ ರಾಜಸ್ಥಾನ ರಾಯಲ್ಸ್‌ ತಂಡದ ಯುವ ಸೆನ್ಸೇಷನ್ ವೈಭವ್ ಸೂರ್ಯವಂಶಿ ಶೀಘ್ರದಲ್ಲೇ ಟೀಮ್​ ಇಂಡಿಯಾಗೆ ಪಾದರ್ಪಣೆ ಮಾಡಲಿದ್ದಾರೆ. ಐಪಿಎಲ್ ಟೂರ್ನಿ ಮುಗಿದ ಬೆನ್ನಲ್ಲೇ ಐರ್ಲೆಂಡ್ ಮತ್ತು ಜಿಂಬಾಬ್ವೆ ಟಿ20 ಸರಣಿಗಳಲ್ಲಿ ವೈಭರ್​ ಆಡುವುದು ಬಹುತೇಕ ಖಚಿತವಾಗಿದೆ. ಈ ವಿಷಯದ ಬಗ್ಗೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಆರಂಭದಲ್ಲಿ 15 ವರ್ಷದ ವೈಭವ್ ಅವರನ್ನು ಆಯ್ಕೆ ಮಾಡುವ ಬಗ್ಗೆ ಆಯ್ಕೆದಾರರು ಹಿಂಜರಿದರು ಕೂಡ ಅವರ ಪ್ರತಿಭೆಯ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ವೈಭವ್ ಅವರ ಆಯ್ಕೆಯು ಕೇವಲ ಐಪಿಎಲ್ ಪ್ರದರ್ಶನವಲ್ಲದೇ ಅಂಡರ್-19 ತಂಡದಲ್ಲಿ ಅವರು ನೀಡಿರುವ ಪ್ರದರ್ಶನವನ್ನೂ ಆಧರಿಸಿರುತ್ತದೆ ಎಂದು ತಿಳಿದುಬಂದಿದೆ.
ಅಂದಹಾಗೆ, ವೈಭವ್​ ಅವರು ಈ ವರ್ಷದ ಅಂಡರ್-19 ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ವಿಶೇಷವಾಗಿ ಇಂಗ್ಲೆಂಡ್ ವಿರುದ್ಧದ ಫೈನಲ್‌ನಲ್ಲಿ, ರನ್​ಗಳ ಸುರಿಮಳೆಯನ್ನೇ ಹರಿಸಿದರು. ಕೇವಲ 80 ಎಸೆತಗಳಲ್ಲಿ 15 ಸಿಕ್ಸರ್​ ಮತ್ತು 15 ಬೌಂಡರಿಗಳು ಒಳಗೊಂಡಂತೆ 175 ರನ್​ ಬಾರಿಸಿ, ವಿಶ್ವ ಕ್ರಿಕೆಟ್​ ಬೆರಗಾಗುವಂತೆ ಮಾಡಿದರು. ತಮ್ಮ ಸ್ಫೋಟಕ ಬ್ಯಾಟಿಂಗ್​ನಿಂದ ದಾಖಲೆಯ ಶತಕ ಗಳಿಸಿದ ಪರಿಣಾಮವಾಗಿ, ಟೀಮ್​ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು. ಇನ್ನು ಬಿಹಾರ ಪರ ಆಡುತ್ತಿರುವ ವೈಭವ್, ದೇಶೀಯ ಕ್ರಿಕೆಟ್​ನಲ್ಲೂ ಉತ್ತಮ ದಾಖಲೆ ಹೊಂದಿದ್ದಾರೆ. ಇವೆಲ್ಲವನ್ನೂ ಪರಿಗಣಿಸಿ, ಭಾರತೀಯ ಆಯ್ಕೆದಾರರು ಭಾರತೀಯ ತಂಡಕ್ಕೆ ವೈಭವ್ ಅವರನ್ನು ಆಯ್ಕೆ ಮಾಡುವ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ ಎಂಬ ವರದಿ ಬಂದಿದೆ.
ಐಪಿಎಲ್ 2026ರ ನಂತರ, ಟೀಮ್ ಇಂಡಿಯಾ ಐರ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಭಾರತೀಯ ಆಯ್ಕೆದಾರರು ಈ ಸರಣಿಗಳಿಗೆ ವೈಭವ್ ಅವರನ್ನು ಆಯ್ಕೆ ಮಾಡಿ ಅವರನ್ನು ಟೀಮ್ ಇಂಡಿಯಾಕ್ಕೆ ಅದ್ಧೂರಿಯಾಗಿ ಪರಿಚಯಿಸಲು ಆಶಿಸುತ್ತಿದ್ದಾರೆ. ಈಗಾಗಲೇ ವೈಭವ್​ ಹೆಸರನ್ನು ಶಾರ್ಟ್​ಲಿಸ್ಟ್​ ಮಾಡಲಾಗಿದೆ ಎಂಬ ರೋಚಕ ಮಾಹಿತಿ ಹೊರಬಿದ್ದಿದೆ. ಬಿಸಿಸಿಐ ಮೂಲಗಳೇ ಈ ಮಾಹಿತಿಯನ್ನು ನೀಡಿವೆ. ಅಲ್ಲದೆ, ಆಯ್ಕೆದಾರರು ವೈಭವ್​ ಅವರ ಪ್ರದರ್ಶನವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂಬ ಸಂಗತಿಯೂ ಹೊರಬಿದ್ದಿದೆ.
ಐರ್ಲೆಂಡ್​ ಮತ್ತು ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗಳಲ್ಲಿ ವೈಭವ್ ಅವರನ್ನು ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಕಣಕ್ಕಿಳಿಸಲು ಬಿಸಿಸಿಐ ಯೋಜಿಸುತ್ತಿದೆ ಎಂಬ ಸುದ್ದಿ ಇದೆ. ಒಂದು ವೇಳೆ ಈ ಇಬ್ಬರು ಆಟಗಾರರು ಕಣಕ್ಕಿಳಿದರೆ, ಐರ್ಲೆಂಡ್ ಮತ್ತು ಜಿಂಬಾಬ್ವೆಯ ಪರಿಸ್ಥಿತಿಯನ್ನು ಊಹಿಸಲೂ ಕಷ್ಟ. ವೈಭವ್-ಅಭಿಷೇಕ್ ಜೋಡಿ ಟಿ20 ಸ್ವರೂಪದಲ್ಲೇ ಅತ್ಯಂತ ಬಲಿಷ್ಠ ಆರಂಭಿಕ ಜೋಡಿಯಾಗಬಹುದೆಂಬ ನಿರೀಕ್ಷೆಗಳಿವೆ.

ಎಂಟ್ರಿಯಲ್ಲೇ ದಾಖಲೆ

ಐರ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸಗಳ ಸಮಯದಲ್ಲಿ ವೈಭವ್ ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದರೆ, ಅದು ಹೊಸ ಇತಿಹಾಸವಾಗಲಿದೆ. ಟೀಮ್ ಇಂಡಿಯಾ ಪರ ಪಾದರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಇತಿಹಾಸವನ್ನು ವೈಭೂವ್​ ರಚಿಸಲಿದ್ದಾರೆ. ಜೂನ್ 26 ರಂದು ಐರ್ಲೆಂಡ್ ವಿರುದ್ಧ ವೈಭವ್ ತಮ್ಮ ಮೊದಲ ಟಿ20 ಪಂದ್ಯ ಆಡಿದರೆ, ಆ ಹೊತ್ತಿಗೆ ಅವರಿಗೆ 15 ವರ್ಷ 91 ದಿನಗಳು ತುಂಬಿರುತ್ತವೆ. ಆ ಪಂದ್ಯವಲ್ಲದಿದ್ದರೂ, ಐರ್ಲೆಂಡ್ ಮತ್ತು ಜಿಂಬಾಬ್ವೆ ಸರಣಿಯಲ್ಲಿ ಅವರು ಪಾದರ್ಪಣೆ ಮಾಡುವ ಯಾವುದೇ ಪಂದ್ಯವು ಇತಿಹಾಸವಾಗುತ್ತದೆ. ಏಕೆಂದರೆ, ಭಾರತಕ್ಕೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ಅವರು 16 ವರ್ಷ 205 ದಿನಗಳಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು. ಈ ಲೆಕ್ಕಾಚಾರದಲ್ಲಿ, ವೈಭವ್ ಮತ್ತು ಸಚಿನ್ ನಡುವೆ ದೊಡ್ಡ ಅಂತರವಿರುತ್ತದೆ.

ಐಪಿಎಲ್​ನಲ್ಲಿ ಅಬ್ಬರದಾಟ

ಪ್ರಸ್ತುತ ಐಪಿಎಲ್ ಆವೃತ್ತಿಯಲ್ಲಿ ವೈಭವ್ ಬಿರುಗಾಳಿಯ ಇನ್ನಿಂಗ್ಸ್​ ಆಡುತ್ತಿದ್ದಾರೆ. ಜಸ್​​​ಪ್ರೀತ್​ ಬುಮ್ರಾ, ಜೋಶ್​ ಹ್ಯಾಜಲ್​ವುಡ್​, ಭುವನೇಶ್ವರ್​ ಕುಮಾರ್​ ಸೇರಿದಂತೆ ವಿಶ್ವ ದರ್ಜೆಯ ಬೌಲರ್​ಗಳಿಗೆ ಬೆವರಿಳಿಸುತ್ತಿದ್ದಾರೆ. ವೈಭವ್​ ಅವರು ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ 40ರ ಸರಾಸರಿ ಮತ್ತು 263.16 ಸ್ಟ್ರೈಕ್ ರೇಟ್‌ನೊಂದಿಗೆ 200 ರನ್ ಗಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಒಬ್ಬರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅನೇಕ ದಾಖಲೆಗಳನ್ನು ಮಾಡಿರುವ ವೈಭವ್​, ಮತ್ತಷ್ಟು ದಾಖಲೆಗಳನ್ನು ಮಾಡಲಿ ಅನ್ನೋದು ಟೀಮ್​ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net