ಆತ ಮಾತ್ರ ಬದಲಾಗಲ್ಲ... ಮತ್ತೊಮ್ಮೆ ವೈಭವ್​ ಸೂರ್ಯವಂಶಿ ಬಗ್ಗೆ ಆರ್​ಸಿಬಿ ಸ್ಟಾರ್​ ಆಟಗಾರನ ಓಪನ್​ ಟಾಕ್​

ವೈಭವ್ ಸೂರ್ಯವಂಶಿ(ಎಡ), ಜಿತೇಶ್​ ಶರ್ಮ (ಬಲ)
ವೈಭವ್ ಸೂರ್ಯವಂಶಿ(ಎಡ), ಜಿತೇಶ್​ ಶರ್ಮ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • 19ನೇ ಐಪಿಎಲ್​ ಆವೃತ್ತಿಯಲ್ಲಿ ವೈಭವ್ ಸೂರ್ಯವಂಶಿ ಅಬ್ಬರದ ಆಟ
  • ಯುವ ಸ್ಟಾರ್​ ಆಟಗಾರನ ಬಗ್ಗೆ ಜಿತೇಶ್​ ಶರ್ಮ ಶಾಕಿಂಗ್ ಹೇಳಿಕೆ
  • ಈ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಆರ್​ಸಿಬಿ ಸ್ಟಾರ್​ ಆಟಗಾರ
Vaibhav Sooryavanshi: 15 ವರ್ಷಕ್ಕೆ ಅಂತಾರಾಷ್ಟ್ರೀಯ ಮತ್ತು ಅನುಭವಿ ಬೌಲರ್​ಗಳನ್ನು ತನ್ನ ಬ್ಯಾಟ್​ನಿಂದ ಬೆಂಡೆತ್ತುತ್ತಿರುವ ವೈಭವ್ ಸೂರ್ಯವಂಶಿಯ ಐಪಿಎಲ್ ಸಾಹಸಗಳು ಬ್ರೇಕ್​ ಇಲ್ಲದೆ ಮುಂದುವರೆದಿವೆ. ಇದು ಕ್ರಿಕೆಟ್​ ಪ್ರೇಮಿಗಳಿಗೆ ರೋಮಾಂಚಕ ಅನುಭವ ಮತ್ತು ಹುಬ್ಬೇರಿಸುತ್ತಿರುವುದು ಗಮನಾರ್ಹ. ಕೇವಲ 14, 15 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಈ ಯುವ ಆಟಗಾರ, 36 ಬಾಲ್​ಗಳಲ್ಲಿ ಸ್ಫೋಟಕ ಶತಕವನ್ನು ಸಿಡಿಸುವ ಮೂಲಕ ದಿಗ್ಗಜ ಕ್ರಿಕೆಟಿಗರೇ ಅಬ್ಬಬ್ಬಾ ಎನ್ನುವಂತೆ ಮಾಡಿರುವುದು ನಿಜಕ್ಕೂ ಗಮನಾರ್ಹ. ಹೀಗಿರುವಾಗ, ತನ್ನ ಸ್ನೇಹಿತ ವೈಭವ್​ ಒಬ್ಬ ಪ್ರೊಫೆಶನಲ್ ಕ್ರಿಕೆಟಿಗ ಅಲ್ಲ ಎಂದು ಆರ್​ಸಿಬಿ ಸ್ಟಾರ್​ ಆಟಗಾರ ಜಿತೇಶ್​ ಶರ್ಮ ಮತ್ತೊಮ್ಮೆ ಹೇಳಿದ್ದಾರೆ.
ಈ ಹಿಂದೆ ಒಮ್ಮೆ ವೈಭವ್​ ವೃತ್ತಿಪರ ಆಟಗಾರನಲ್ಲ, ಆತ ಬದಲಾಗುವುದಿಲ್ಲ ಎಂದು ಹೇಳಿದ್ದ ಜಿತೇಶ್​ ಶರ್ಮ, ಮಧ್ಯರಾತ್ರಿ ಎದ್ದು ಐಸ್​ಕ್ರೀಮ್​ ಕೇಳ್ತಾನೆ. ಇದನ್ನೆಲ್ಲ ನೋಡಿದರೆ, ಅವನು ಚೇಂಚ್​ ಆಗಲ್ಲ. ಆತ ವೃತ್ತಿಪರನಾಗಿ ಬದಲಾಗಲ್ಲ ಎಂದಿದ್ದರು. ಜಿತೇಶ್​ ಅವರ ಈ ಹೇಳಿಕೆಗೆ ಸೂರ್ಯವಂಶಿ ಅಭಿಮಾನಿಗಳು ಗರಂ ಆಗಿದ್ದರು. ಇಂತಹ ಮಾತುಗಳನ್ನು ನಾವು ಒಪ್ಪುವುದಿಲ್ಲ ಎಂದು ಜಿತೇಶ್​ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಅದಕ್ಕೀಗ ಪ್ರತಿಕ್ರಿಯಿಸಿರುವ ಆರ್​ಸಿಬಿ ಸ್ಟಾರ್​ ಆಟಗಾರ, ನನ್ನ ಹೇಳಿಕೆಗೆ ನಾನು ಬದ್ಧ ಎಂದಿರುವುದು ಬೇಬಿ ಬಾಸ್​ ಫ್ಯಾನ್ಸ್ ಕಣ್ಣನ್ನು ಕೆಂಪಗಾಗಿಸಿದೆ.
ಈ ಮೊದಲು ಮಾಜಿ ಆರ್​ಸಿಬಿ ಕ್ರಿಕೆಟಿಗ, ಮಿ.360 ಎಬಿ ಡಿವಿಲಿಯರ್ಸ್​ ಅವರ ಯೂಟ್ಯೂಬ್​ ಚಾನಲ್​ನಲ್ಲಿ ಕುಳಿತು ಮಾತನಾಡಿದ್ದ ಜಿತೇಶ್​, ವೈಭವ್​ ನನಗೆ ಒಬ್ಬ ಒಳ್ಳೆಯ ಸ್ನೇಹಿತ. ನಾವಿಬ್ಬರು ತುಂಬ ಕ್ಲೋಸ್​ ಇದ್ದೀವಿ. ಅವನಿಗೆ ನಾನು ಯಾವಾಗ ಬೇಕಾದರೂ ಫೋನ್​ ಮಾಡಿ, ಮಾತಾಡುತ್ತೀನಿ. ಆ ಮಟ್ಟಿಗಿನ ಸ್ನೇಹ ನಮ್ಮ ನಡುವೆ ಇದೆ ಎಂದಿದ್ದರು. ಇದನ್ನು ಸ್ಪಷ್ಟತೆಗಾಗಿ ಆರ್​ಸಿಬಿ ಇನ್​ಸೈಡರ್​ ಶೋನಲ್ಲಿ ಮತ್ತೊಮ್ಮೆ ವಿವರಿಸಿದ ಜಿತೇಶ್​ ಶರ್ಮ, ಯಾವ ಯುವ ಕ್ರಿಕೆಟಿಗ ನಿಮ್ಮ ಪ್ರಕಾರ ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರನಾಗಿ ಮಿಂಚಬಹುದು ಎಂಬ ಪ್ರಶ್ನೆಗೆ ನನ್ನ ಉತ್ತರವೇ ವೈಭವ್​ ಸೂರ್ಯವಂಶಿ ಎಂದರು.
ಆತನ ಟೆಕ್ನಿಕ್​, ಪ್ರತಿಭೆ, ಬುದ್ಧಿವಂತಿಕೆ ಮತ್ತು ಕಠಿಣ ಶ್ರಮದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಟಿ20, ಏಕದಿನ ಮತ್ತು ಟೆಸ್ಟ್​, ಈ ಮೂರು ಫಾರ್ಮೆಟ್​ಗಳಲ್ಲಿಯೂ ವೈಭವ್​ ಅದ್ಭುತವಾಗಿ ಆಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾನೆ. ಮೈದಾನದಲ್ಲಿ ಅವನು ವೃತ್ತಿಪರ ಅಂತ ಕಂಡರೂ, ರಿಯಾಲಿಟಿಯಲ್ಲಿ ಆತ ಅದಾಗಿಲ್ಲ. 15 ವರ್ಷದ ಹುಡುಗ ಮಧ್ಯರಾತ್ರಿ ಐಸ್​ಕ್ರೀಮ್​ ತಿಂತಾನೆ. ನನ್ನೊಟ್ಟಿಗೆ ರೂಮ್​ನಲ್ಲಿ ಕುಳಿತು ತಿನ್ನಲು ಇಷ್ಟಪಡ್ತಾನೆ. ನನ್ನ ಪತ್ನಿ ಜೊತೆಗೂ ಮಾತಾಡ್ತಾನೆ. ಯೂಟ್ಯೂಬ್​ನಲ್ಲಿ ಕಾರ್ಟೂನ್​ ನೋಡುತ್ತಿರುತ್ತಾನೆ. ಅವನು ನನ್ನ ತಮ್ಮನಂತೆ. ನಾನು ಯಾವ ರೀತಿಯಲ್ಲಿ ಅವನಿಗೆ ಅನ್​ಫ್ರೊಫೆಶನಲ್​ ಅಂತ ಹೇಳಿದ್ದೀನಿ ಎಂಬುದು ನನಗೆ ಗೊತ್ತಿಗೆ. ಟೀಕಾಕಾರರಿಗೆ ಹೇಳುವ ಅವಶ್ಯತೆಯಿಲ್ಲ ಎಂದಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net