15 ವರ್ಷ, 3 ತಿಂಗಳು, 7 ದಿನ... ಕಡೆಗೂ ಕ್ರಿಕೆಟ್​ ದಂತಕಥೆ ಸಚಿನ್​​​ ದಾಖಲೆ ಮುರಿದ​ ವಂಡರ್​ ಕಿಡ್​ ವೈಭವ್!

ಸಚಿನ್ ತೆಂಡೂಲ್ಕರ್​, ವೈಭವ್ ಸೂರ್ಯವಂಶಿ
ಸಚಿನ್ ತೆಂಡೂಲ್ಕರ್​, ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • ಇಂದಿನಿಂದ ಐರ್ಲೆಂಡ್​ ವಿರುದ್ಧದ ಟಿ20 ಸರಣಿ ಆರಂಭ
  • ಕೊನೆಗೂ ಪ್ಲೇಯಿಂಗ್​ ಇಲೆವನ್​ ತಂಡದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ
  • ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ದಾಖಲೆ ಉಡೀಸ್​
Vaibhav Sooryavanshi: ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಐದು ಟಿ20 ಪಂದ್ಯಗಳ ಇಂಗ್ಲೆಂಡ್​ ಸರಣಿಯ ಎರಡನೇ ಪಂದ್ಯದಲ್ಲಿ ಕೊನೆಗೂ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಈ ನಿಟ್ಟಿನಲ್ಲಿ, ಕೊನೆಗೂ ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್​ ಅವರ ಹಳೆಯ ದಾಖಲೆಯನ್ನು ವಂಡರ್​ ಕಿಡ್​ ಬ್ರೇಕ್​ ಮಾಡಿದ್ದಾರೆ. ​
ಐರ್ಲೆಂಡ್​ ಸರಣಿಯ ಎರಡು ಟಿ20 ಪಂದ್ಯಗಳಿಂದಲೂ ವೈಭವ್​ರನ್ನು ಕೈಬಿಟ್ಟಿದ್ದ ಮ್ಯಾನೇಜ್​ಮೆಂಟ್​ಗೆ ಭಾರಿ ಮುಖಭಂಗವೇ ಉಂಟಾಗಿತ್ತು. ಈಗ ಇಂಗ್ಲೆಂಡ್​ ಸರಣಿಯನ್ನು ಆಡುತ್ತಿರುವ ಟೀಮ್ ಇಂಡಿಯಾ, ಮೊದಲ ಪಂದ್ಯದಿಂದ ಅವರನ್ನು ತಂಡದಿಂದ ಹೊರಗಿಟ್ಟಿತ್ತು. ಇದು ಅಪಾರ ಸಂಖ್ಯೆಯ ಕ್ರಿಕೆಟ್​ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹೆಡ್​ ಕೋಚ್​ ಗೌತಮ್ ಗಂಭೀರ್​ ನೇತೃತ್ವದ ಮ್ಯಾನೇಜ್​ಮೆಂಡ್​ ವಿರುದ್ಧ ವ್ಯಾಪಕ ಟೀಕೆ, ವ್ಯಂಗ್ಯಗಳು ವ್ಯಕ್ತವಾದ ಬೆನ್ನಲ್ಲೇ ಎರಡನೇ ಪಂದ್ಯದಿಂದ ಸಂಜು ಸ್ಯಾಮ್ಸನ್​ರನ್ನು ಕೆಳಗಿಳಿಸಿ, ಅವರ ಸ್ಥಾನಕ್ಕೆ ವೈಭವ್​ರನ್ನು ಕರೆತರಲಾಗಿದೆ.

ಸಚಿನ್, ಶೆಫಾಲಿ ವರ್ಮಾ ದಾಖಲೆ ಉಡೀಸ್​

ಆಡಿರುವ ಮೂರು ಪಂದ್ಯಗಳಲ್ಲಿ ಸತತವಾಗಿ ಫ್ಲಾಪ್​ ಪ್ರದರ್ಶನ ನೀಡಿರುವ ಸಂಜು ಸ್ಯಾಮ್ಸನ್​ರನ್ನು ಹೊರಗಿಟ್ಟು, ಅವರ ಸ್ಥಾನಕ್ಕೆ ವೈಭವ್​ಗೆ ಅವಕಾಶ ಕೊಡಿ ಎಂಬ ಅಭಿಮಾನಿಗಳ ಕೂಗಿಗೆ ಕಡೆಗೂ ಗೌತಮ್​ ಗಂಭೀರ್​ ನೇತೃತ್ವದ ಮ್ಯಾನೇಜ್​ಮೆಂಟ್​ ಅಸ್ತು ಎಂದಿದೆ. 15 ವರ್ಷ, 3 ತಿಂಗಳು ಮತ್ತು 7 ದಿನಗಳಲ್ಲಿ, ವೈಭವ್ ಸೂರ್ಯವಂಶಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನಾಗಿ ಐತಿಹಾಸಿಕ ಹಾಗೂ ಅಪರೂಪದ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ 'ಕ್ರಿಕೆಟ್​ ದೇವರ' 36 ವರ್ಷಗಳ ಹಳೆಯ ರೆಕಾರ್ಡ್​ ಅನ್ನೇ ಮುರಿದಿರುವ ಬಿಹಾರದ ಯುವ ಬ್ಯಾಟ್ಸ್‌ಮನ್, 2019ರಲ್ಲಿ 15 ವರ್ಷ ಮತ್ತು 239 ದಿನಗಳಲ್ಲಿ ಮಹಿಳಾ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಶೆಫಾಲಿ ವರ್ಮಾ ಅವರ ದಾಖಲೆಯನ್ನೂ ಹಿಂದಿಕ್ಕಿರುವುದು ಗಮನಾರ್ಹ.
.
ಸಚಿನ್ ತೆಂಡೂಲ್ಕರ್ ಭಾರತಕ್ಕಾಗಿ ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರರಾಗಿದ್ದರು. 1989ರಲ್ಲಿ ಪಾಕಿಸ್ತಾನ ವಿರುದ್ಧ 16 ವರ್ಷ ಮತ್ತು 205 ದಿನಗಳ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, ನಂತರ ನಿರ್ಮಿಸಿದ್ದು ದಾಖಲೆಗಳ ಸುರಿಮಳೆ. ಈಗ ವೈಭವ್ ಸೂರ್ಯವಂಶಿ ಇಂಗ್ಲೆಂಡ್​ ವಿರುದ್ಧ ಟಿ20 ಕ್ಯಾಪ್​ ಧರಿಸಿದ್ದೇ ತಡ, ಕೇವಲ 15ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಅತ್ಯಂತ ಕಿರಿಯ ಭಾರತೀಯ ಆಟಗಾರನಾಗಿ ಕ್ರಿಕೆಟ್​ ಜಗತ್ತಿನಲ್ಲಿ ತಮ್ಮದೇ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಅತ್ಯಧಿಕ ರನ್ ದಾಖಲೆ

ಭಾರತ ಪರ ಟಿ20 ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಅಜಿಂಕ್ಯ ರಹಾನೆ ಹೊಂದಿದ್ದಾರೆ. 2011ರಲ್ಲಿ ಇಂಗ್ಲೆಂಡ್ ಎದುರು ತಮ್ಮ ಪದಾರ್ಪಣೆ ಪಂದ್ಯದಲ್ಲಿ ರಹಾನೆ 39 ಎಸೆತಗಳಲ್ಲಿ 61 ರನ್ ಗಳಿಸಿದರು. ವೈಭವ್ ಸೂರ್ಯವಂಶಿ ತಮ್ಮ ಚೊಚ್ಚಲ ಪಂದ್ಯದಲ್ಲಿ 62 ರನ್ ಬಾರಿಸಿದರೆ, ರಹಾನೆ ಅವರ ದಾಖಲೆ ಮೊದಲು ಉಡೀಸ್​ ಆಗುತ್ತದೆ.

ಅತಿ ಹೆಚ್ಚು ಸಿಕ್ಸರ್‌ ದಾಖಲೆ

ಭಾರತದ ಪರ ಟಿ20 ಚೊಚ್ಚಲ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ಸದ್ಯ ಇಶಾನ್ ಕಿಶನ್ ಅವರ ಹೆಸರಿನಲ್ಲಿದೆ. ಇಂಗ್ಲೆಂಡ್ ವಿರುದ್ಧದ ತಮ್ಮ ಚೊಚ್ಚಲ ಟಿ20 ಪಂದ್ಯದಲ್ಲಿ ಇಶಾನ್ 4 ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅದೇ ವೈಭವ್ ಏನಾದರೂ ತಮ್ಮ ಚೊಚ್ಚಲ ಪಂದ್ಯದಲ್ಲಿ 5 ಸಿಕ್ಸರ್‌ಗಳನ್ನು ಬಾರಿಸಿದರೆ, ಕಿಶನ್​ ದಾಖಲೆಯನ್ನು ಮುರಿದು ಅಗ್ರಸ್ಥಾನಕ್ಕೇರುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net