ಶ್ರೀಲಂಕಾ ಪಡೆಗೆ ಚಳಿ ಬಿಡಿಸಿದ ವಂಡರ್ ಕಿಡ್​! ಏಕದಿನ ಕ್ರಿಕೆಟ್​ನಲ್ಲಿ ವೈಭವ್ ಐತಿಹಾಸಿಕ ದಾಖಲೆ

ವೈಭವ್ ಸೂರ್ಯವಂಶಿ ಸ್ಫೋಟಕ ಆಟ
ವೈಭವ್ ಸೂರ್ಯವಂಶಿ ಸ್ಫೋಟಕ ಆಟ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀಲಂಕಾ ಎ ವಿರುದ್ಧದ ತ್ರಿಕೋನ ಸರಣಿಯ ಫೈನಲ್​ನಲ್ಲಿ ವೈಭವ್ ಅಬ್ಬರ
  • ಕೇವಲ 11 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ವಂಡರ್ ಕಿಡ್​
  • 50 ಓವರ್ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ಸೂರ್ಯವಂಶಿ
Vaibhav Sooryavanshi: ಭಾರತ ಎ ಮತ್ತು ಶ್ರೀಲಂಕಾ ಎ ವಿರುದ್ಧ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್​ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಬ್ಯಾಟಿಂಗ್​ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಕಳೆದ ಪಂದ್ಯದಲ್ಲಿ ವೈಭವ್​ರನ್ನು ಕೆಣಕಿದ್ದ ಲಂಕಾ ಆಟಗಾರರು, ಹೋಗು ಮನೆಗೆ ಹೋಗು ಎಂದು ಮೈದಾನದಲ್ಲೇ ಸ್ಟಾರ್​ ಕಿಡ್​ನ ಕಿಚ್ಚಾಯಿಸಿದ್ದರು. ಆದರೆ, ಇಂದಿನ ಅಂತಿಮ ಕಾಳಗದಲ್ಲಿ ಕೇವಲ 11 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ, ಮತ್ತೊಮ್ಮೆ ತಾವೇನು? ತಮ್ಮ ಸಾಮರ್ಥ್ಯವೇನು? ಎಂಬುದನ್ನು ಸಾಬೀತುಪಡಿಸಿದ್ದಾರೆ. 324.14 ಸ್ಟ್ರೈಕ್​ರೇಟ್​ನಲ್ಲಿ 10 ಬೌಂಡರಿ, 8 ಸಿಕ್ಸರ್​ಗಳನ್ನು ಬಾರಿಸಿದ ವೈಭವ್​, ಕೇವಲ 29 ಎಸೆತಗಳಲ್ಲಿ 94 ರನ್​ ಸಿಡಿಸಿ ಶತಕದಿಂದ ವಂಚಿತರಾದರು. ​
ಭಾನುವಾರ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ತ್ರಿಕೋನ ಸರಣಿಯ ಅಂತಿಮ ಪಂದ್ಯದಲ್ಲಿ ವೈಭವ್ ಅವರ ಸ್ಫೋಟಕ ಆಟಕ್ಕೆ ಎದುರಾಳಿ ತಂಡದ ಆಟಗಾರರು ಅಕ್ಷರಶಃ ಬೆರಗಾಗಿದ್ದಾರೆ. ಕೇವಲ 11 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್​, 10 ಬೌಂಡರಿ, 8 ಸಿಕ್ಸರ್​ ಸಹಾಯದಿಂದ 94 ರನ್​ ಕಲೆಹಾಕಿರುವುದು ಈಗ ದಾಖಲೆಗೆ ಸಾಕ್ಷಿಯಾಗಿದೆ. ಈ ಮೂಲಕ ಲಿಸ್ಟ್-ಎ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕ ದಾಖಲಿಸಿದ ಆಟಗಾರನಾಗಿ ವೈಭವ್ ಮಿಂಚಿದ್ದಾರೆ.
ಸ್ವಲ್ಪದರಲ್ಲೇ ಶತಕ ಮಿಸ್​ ಮಾಡಿಕೊಂಡರೂ, 324.14ರ ಸ್ಟ್ರೈಕ್ ರೇಟ್‌ನೊಂದಿಗೆ ಅವರು ಲಂಕಾ ಬೌಲರ್‌ಗಳನ್ನು ಬೆಂಡೆತ್ತಿದ ರೀತಿಗೆ ಇಡೀ ಕ್ರಿಕೆಟ್​ ಜಗತ್ತೇ ಹುಬ್ಬೇರಿಸಿದೆ. ವೈಭವ್ ಪಂದ್ಯದ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಪ್ರದರ್ಶನ ನೀಡಲು ಶುರು ಮಾಡಿದರು. ಶಿರಾಜ್ ಎಸೆದ ಮೊದಲ ಚೆಂಡನ್ನು ಬೌಂಡರಿಗೆ ಹೊಡೆದ ವಂಡರ್​ ಕಿಡ್​, ಶ್ರೀಲಂಕನ್​ ಪಡೆಯ ಯಾವ ಬೌಲರ್​ಗಳಿಗೂ ಕರುಣೆ ತೋರದೆ ಹಿಗ್ಗಾಮುಗ್ಗಾ ಜಾಡಿಸಿರುವುದು ನೋಡುಗರಿಗೆ ಸಖತ್ ಮಜಾ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net