ಕಿವೀಸ್​ ಎದುರು 4 ರನ್​ಗೆ ಔಟ್​ ಆದರೂ ಮತ್ತೊಂದು ಅಪರೂಪದ ದಾಖಲೆಗೆ ಸಾಕ್ಷಿಯಾದ ವಂಡರ್​ ಕಿಡ್​​! Vaibhav Sooryavanshi

ಕೇವಲ 15 ವರ್ಷ ಮತ್ತು 211 ದಿನಗಳ ವಯಸ್ಸಿನಲ್ಲಿ, ಅವರು ನ್ಯೂಜಿಲೆಂಡ್ ಮಣ್ಣಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ ಅತ್ಯಂತ ಕಿರಿಯ ಆಟಗಾರರಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.
Vaibhav Sooryavanshi
ಕಿವೀಸ್​ ಎದುರು 4 ರನ್​ಗೆ ಔಟ್​ ಆದರೂ ಮತ್ತೊಂದು ಅಪರೂಪದ ದಾಖಲೆಗೆ ಸಾಕ್ಷಿಯಾದ ವಂಡರ್​ ಕಿಡ್​​! Vaibhav Sooryavanshi
Published on: 

Vaibhav Sooryavanshi: ಟೀಮ್ ಇಂಡಿಯಾದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ ಯಾರಿಗೆ ಗೊತ್ತಿಲ್ಲ ಹೇಳಿ? ಕೇವಲ 15 ವರ್ಷಕ್ಕೆ ಸಾಲು ಸಾಲು ದಾಖಲೆಗಳನ್ನು ಮುರಿದು, ತನ್ನದೇ ಹೊಸ ಇತಿಹಾಸ ಸೃಷ್ಟಿಸುತ್ತಿರುವ ಈ ಸ್ಟಾರ್​ ಬ್ಯಾಟ್ಸ್​ಮನ್​ನ್ನು ಹೊಗಳಿ, ಕೊಂಡಾಡದವರೇ ಇಲ್ಲ. ಆ ಮಟ್ಟಿಗೆ ಕಿರಿಯ ವಯಸ್ಸಿಗೆ ಅಪಾರ ಸಾಧನೆಗಳನ್ನು ಮಾಡಿದ್ದಾರೆ ವೈಭವ್​. ಇಂದು ನ್ಯೂಜಿಲೆಂಡ್​ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ 4 ರನ್​ಗೆ ಔಟ್​ ಆದರೂ ಮತ್ತೊಂದು ಅಪರೂಪದ ದಾಖಲೆಗೆ ಸಾಕ್ಷಿಯಾಗಿದ್ದಾರೆ.

ಇಂದು ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ತಂಡದ ಪರ ಆಡಲು ಅವಕಾಶ ಪಡೆದ ವೈಭವ್​, 4 ರನ್​ಗೆ ಔಟ್​ ಆಗಿ ಬೇಸರದಿಂದ ಪೆವಿಲಿಯನ್​ ಹಾದಿ ಹಿಡಿದರು. ಇದರಿಂದ, ಬೇಬಿ ಬಾಸ್​ ಅಭಿಮಾನಿಗಳು ಆರಂಭದಲ್ಲಿ ಬೇಸರಗೊಂಡಿದ್ದೇ ಆದರೂ ಅವರ ಮತ್ತೊಂದು ಅಪರೂಪದ ಸಾಧನೆ ಕೇಳಿ ಸಖತ್ ಖುಷಿ ಪಟ್ಟಿದ್ದಾರೆ. ಕೇವಲ 15 ವರ್ಷ ಮತ್ತು 211 ದಿನಗಳ ವಯಸ್ಸಿನಲ್ಲಿ, ಅವರು ನ್ಯೂಜಿಲೆಂಡ್ ಮಣ್ಣಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ ಅತ್ಯಂತ ಕಿರಿಯ ಆಟಗಾರರಾಗಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಈ ಅಪರೂಪದ ಸಾಧನೆ ಮೂಲಕ ವೈಭವ್ ಸೂರ್ಯವಂಶಿ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಆಟಗಾರರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಇದುವರೆಗೆ ಈ ದಾಖಲೆ ಬಾಂಗ್ಲಾದೇಶದ ಆಟಗಾರ ಮೊಹಮ್ಮದ್ ಷರೀಫ್ ಹೆಸರಿನಲ್ಲಿತ್ತು. ಅವರು ಡಿಸೆಂಬರ್ 18, 2001ರಂದು 16 ವರ್ಷ ಮತ್ತು 6 ದಿನಗಳ ವಯಸ್ಸಿನಲ್ಲಿ ಹ್ಯಾಮಿಲ್ಟನ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಡಿದರು. ಅಲ್ಲದೆ, ಪಾಕಿಸ್ತಾನದ ಆಕಿಬ್ ಜಾವೇದ್ 16 ವರ್ಷ ಮತ್ತು 185 ದಿನಗಳ ವಯಸ್ಸಿನಲ್ಲಿ ಈ ಪಟ್ಟಿಗೆ ಸೇರಿದ್ದಾರೆ. ನಂತರದಲ್ಲಿ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು 16 ವರ್ಷ 284 ದಿನಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ.

ಪಂದ್ಯದ ವಿವರ

ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದ್ದು, ಈ ಮೂಲಕ 2-0 ಅಂತರದಲ್ಲಿ ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಕಿವೀಸ್​ ಪಡೆಗೆ ಬ್ಯಾಟ್​ ಮಾಡುವಂತೆ ಆಹ್ವಾನಿಸಿತು. 20 ಓವರ್​ನಲ್ಲಿ 5 ವಿಕೆಟ್​ ನಷ್ಟಕ್ಕೆ ನ್ಯೂಜಿಲೆಂಡ್​ 180 ರನ್​ಗಳನ್ನು ಕಲೆಹಾಕಿತು. ಈ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಭಾರತಕ್ಕೆ, ಆರಂಭಿಕರಾದ ಅಭಿಷೇಕ್​ ಶರ್ಮ (27), ಸಂಜು ಸ್ಯಾಮ್ಸನ್ (14)​ ಮತ್ತು ವೈಭವ್ ಸೂರ್ಯವಂಶಿಯಿಂದ (4) ಉತ್ತಮ ಇನ್ನಿಂಗ್ಸ್ ಬರಲಿಲ್ಲ.

Also Read
ಕಥೆ, ಪಾತ್ರ ಯಾವುದೂ ಹೊಸತಲ್ಲ! ಇಷ್ಟಾದ್ರೂ 'ಪ್ರೇಮದ ಊರಲಿ' ಹೌಸ್​ಫುಲ್​ ಶೋಗಳ ಹಿಂದಿದೆ​​ ಈ ಸೀಕ್ರೆಟ್​ | Premada Oorali
Vaibhav Sooryavanshi

ಈ ವೇಳೆ, ಕ್ರೀಸ್​ಗೆ ಅಂಟಿ ನಿಂತ ತಿಲಕ್ ವರ್ಮಾ, 26 ಎಸೆತಗಳಲ್ಲಿ 51 ರನ್​ ಸಿಡಿಸಿದರೆ, ನಮನ್​ ಧಿರ್​ 17 ಎಸೆತಗಳಲ್ಲಿ 31 ರನ್​ ಬಾರಿಸಿದರು. ನ್ಯೂಜಿಲೆಂಡ್ ಬೌಲರ್‌ಗಳನ್ನು ಮೆಟ್ಟಿ ನಿಂತ ಈ ಯುವ ಜೋಡಿ, ಜವಾಬ್ದಾರಿಯುತ ಇನ್ನಿಂಗ್ಸ್​ ಮೂಲಕ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಕೊನೆಗೂ ಯಶಸ್ವಿಯಾಯಿತು. ಕೊನೆಯ ಕ್ಷಣದವರೆಗೂ ರೋಚಕತೆಯಿಂದ ಸಾಗಿದ ಪಂದ್ಯದಲ್ಲಿ ಒಂದೇ ಒಂದು ಬಾಲ್​ ಇರುವಂತೆ ಟೀಮ್ ಇಂಡಿಯಾ ಗೆಲುವು ಸಾಧಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net