ಅಷ್ಟಕ್ಕೂ, ಅದಕ್ಕೆ ಸಮಯವೂ ಮುಗಿದು ಹೋಗಿದೆ. ಏಕೆಂದರೆ, ಆ ದಾಖಲೆಯು ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ಹೆಸರಿನಲ್ಲಿ ಕಳೆದ 15 ವರ್ಷಗಳಿಂದ ಶಾಶ್ವತವಾಗಿ ಉಳಿದುಕೊಂಡಿದೆ. ಇತ್ತೀಚೆಗಷ್ಟೇ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ರಹಾನೆ, ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ಸಂದೇಶ ಹಂಚಿಕೊಳ್ಳುವ ಮೂಲಕ ನಿವೃತ್ತಿ ಘೋಷಿಸಿದರು. ರಹಾನೆ ಮೂರು ಸ್ವರೂಪಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರೂ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆಟಗಾರ ಎಂದೇ ಗುರುತಿಸಿಕೊಂಡವರು. ಟಿ20ಯಲ್ಲಿ ಅಜಿಂಕ್ಯಾ ಅವರು ಅಪರೂಪದ ದಾಖಲೆಯನ್ನು ಬರೆದಿದ್ದು, ಸ್ಫೋಟಕ ಬ್ಯಾಟಿಂಗ್ನಿಂದ ಶತಕಗಳನ್ನು ಬಾರಿಸುವ ವೈಭವ್ರಿಂದಲೂ ಅದು ಸಾಧ್ಯವಾಗಿಲ್ಲ ಎಂಬುದೇ ಆಶ್ಚರ್ಯ.