ನವದೆಹಲಿ: ಮೊದಲೇ ವಿವಾದ, ಹೈಡ್ರಾಮಾಗಳಿಂದ ಕ್ರಿಕೆಟ್ ಪ್ರಿಯರ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿರುವ ಪಾಕಿಸ್ತಾನ ತಂಡ, ಇದೀಗ ತಮ್ಮ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಕ್ ಮಾಡುತ್ತಿರುವ ಬೌಲಿಂಗ್ ಶೈಲಿಯಿಂದ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಈ ಕುರಿತು ಪಾಕ್ ದಿಗ್ಗಜ, ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಂ ಕಿಡಿಕಾರಿದ್ದಾರೆ. ಮತ್ತೊಂದೆಡೆ ಅಚ್ಚರಿ ಎಂಬಂತೆ ಆರ್. ಅಶ್ವಿನ್ ಉಸ್ಮಾನ್ ಪರ ವಹಿಸಿ, ಮಾತನಾಡಿದ್ದಾರೆ.