ನ್ಯೂಯಾರ್ಕ್: ಹಾಲಿ ಚಾಂಪಿಯನ್ ಹಾಗೂ ವಿಶ್ವ ನಂ.1 ತಾರೆ ಅರಿನಾ ಸಬಲೆಂಕಾ ಯುಎಸ್ ಓಪನ್ ಹಾರ್ಡ್ ಕೋರ್ಟ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ 16ರ ಘಟ್ಟಕ್ಕೇರಿದರು. 2ನೇ ಶ್ರೇಯಾಂಕಿತೆ ಎಲೆನಾ ರೈಬಕಿನಾ, 4ನೇ ಶ್ರೇಯಾಂಕಿತೆ ಕೋಕೋ ಗ್ೌ, 5ನೇ ಶ್ರೇಯಾಂಕಿತೆ ಮಿರ‌್ರಾ ಆಂಡ್ರೀವಾ, ಜಪಾನ್‌ನ ನವೋಮಿ ಒಸಾಕಾ, ಫಿಲಿಪ್ಪಿನ್ಸ್‌ನ ಅಲೆಕ್ಸಾಂಡ್ರ ಈಲಾ ಎರಡನೇ ಸುತ್ತಿನ ಗೆಲುವಿನೊಂದಿಗೆ ಮುನ್ನಡೆದರು. ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಶ್ರೇಯಾಂಕಿತ ಅಲೆಕ್ಸಾಂಡರ್ ಜ್ವೆರೆವ್, 5ನೇ ಶ್ರೇಯಾಂಕಿತ ಫ್ಲಾವಿಯೊ ಕೊಬೊಲ್ಲಿ, ಮೂರನೇ ಸುತ್ತಿಗೇರಿದರೆ, ಮೂರನೇ ಶ್ರೇಯಾಂಕಿತ ಫೆಲಿಕ್ಸ್ ಅಗುರ್ ಅಲಿಯಾಸ್ಸಿಮ್, 6ನೇ ಶ್ರೇಯಾಂಕಿತ ಅಲೆಕ್ಸ್ ಡಿ ಮಿನೌರ್ ಹಾಗೂ ಅನುಭವಿ ಗೇಲ್ ಮೊನ್‌ಫಿಲ್ಸ್ ಎರಡನೇ ಸುತ್ತಿನಲ್ಲೇ ಹೊರಬಿದ್ದರು.