MS Dhoni: ನಿನ್ನೆ (ಜು.14) ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದು ಬೀಗಿತು. ಇದೇ ಮ್ಯಾಚ್ನಲ್ಲಿ ಅಭಿಮಾನಿಗಳ ಸಂಪೂರ್ಣ ಗಮನವನ್ನು ತನ್ನತ್ತ ಸೆಳೆದ ಮಹೇಂದ್ರ ಸಿಂಗ್ ಧೋನಿ, ತಮ್ಮ ಪಕ್ಕ ಕುಳಿತಿದ್ದ ಪುಟ್ಟ ಅಭಿಮಾನಿ ಬಳಿ ಪಾಪ್ಕಾರ್ನ್ ಪಡೆದ ದೃಶ್ಯ ಫ್ಯಾನ್ಸ್ ಹೃದಯ ಗೆದ್ದಿತು. ಮತ್ತೊಂದೆಡೆ, ಧೋನಿ ಕಿವಿಗೆ ಹಾಕಿಕೊಂಡಿದ್ದ ವಿಶೇಷ ವಸ್ತುವೊಂದು ಅನೇಕರ ಕುತೂಹಲ ಕೆರಳಿಸಿದೆ.