ಪಾಕ್​ ವೇಗಿ ಹುಚ್ಚು ಸಂಭ್ರಮಕ್ಕೆ ಮೈದಾನದಲ್ಲೇ ಖಡಕ್​ ಉತ್ತರ ಕೊಟ್ಟ ವೈಭವ್ ಸೂರ್ಯವಂಶಿ! ವಿಡಿಯೋ ವೈರಲ್​

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ
Published on

ಪ್ರಮುಖ ಮುಖ್ಯಾಂಶಗಳು

  • U19 ಏಷ್ಯಾಕಪ್​ ಸೋತ ಭಾರತ ತಂಡ
  • ಫೈನಲ್ ಪಂದ್ಯದಲ್ಲಿ ಪಾಕ್ ವೇಗಿ ಹುಚ್ಚು ಸಂಭ್ರಮಕ್ಕೆ ವೈಭವ್ ಗರಂ
  • ಮೈದಾನದಲ್ಲೇ ಖಡಕ್ ಉತ್ತರ ಕೊಟ್ಟ ಬೇಬಿ ಬಾಸ್
ನವದೆಹಲಿ: ಇಂದು (ಡಿ.21) ದುಬೈನ ಐಸಿಸಿ ಅಕಾಡೆಮಿ ಮೈದಾನದಲ್ಲಿ ನಡೆದ ಅಂಡರ್​ 19 ಏಷ್ಯಾಕಪ್ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ 191 ರನ್​ಗಳಿಂದ ಭಾರತ ವಿರುದ್ಧ ಭಾರೀ ಅಂತರದ ಜಯ ಗಳಿಸಿತು.
ಈ ಮೂಲಕ ಪಾಕಿಸ್ತಾನ ಅಂಡರ್-19 ಏಷ್ಯಾಕಪ್ ಟ್ರೋಫಿ ಗೆದ್ದು ಬೀಗಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕ್​ 50 ಓವರ್‌ಗಳಲ್ಲಿ 347 ರನ್‌ ಗಳಿಸಿ, ಭಾರತಕ್ಕೆ 348 ರನ್‌ಗಳ ಗುರಿ ನೀಡಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಟೀಮ್​ ಇಂಡಿಯಾ 156 ರನ್‌ಗೆ ಆಲ್​ಔಟ್​ ಆಯಿತು. ಇದು ಭಾರತೀಯ ಕ್ರಿಕೆಟ್​ ಪ್ರೇಮಿಗಳ ತೀವ್ರ ಬೇಸರಕ್ಕೆ ಕಾರಣವಾಯಿತು.
ಅದಾಗಲೇ 49ಕ್ಕೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಸ್ಪೋಟಕ ಬ್ಯಾಟರ್ ವೈಭವ್ ವಿಕಟ್​ ಪತನಗೊಂಡಿದ್ದು, ತಂಡದ ಮೇಲೆ ಇನ್ನೂ ಒತ್ತಡವನ್ನು ಹೆಚ್ಚಿಸಿತು. ಸೂರ್ಯವಂಶಿ ವಿಕೆಟ್​ ಕಬಳಿಸಿದ ಪಾಕ್ ವೇಗಿ ಅಲಿ ಅಲಿ ರಝಾ, ಹುಚ್ಚು ಸಂಭ್ರಮಕ್ಕೆ ಸಾಕ್ಷಿಯಾದರು. ಇದನ್ನು ತಿರುಗಿ ನೀಡಿದ 'ಬೇಬಿ ಬಾಸ್​', ವೇಗಿಗೆ ತಮ್ಮ ಶೂನತ್ತ ಬೆರಳು ತೋರಿಸುವ ಮೂಲಕ ನೀನು ನನ್ನ ಕಾಲಿನ ಕೆಳಗೆ ಎಂಬ ಸಂದೇಶವನ್ನು ರವಾನಿಸಿದ್ದು ನಿಜಕ್ಕೂ ಹಲವರ ಅಚ್ಚರಿಗೆ ಕಾರಣವಾಯಿತು. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಭಾರತ ಬ್ಯಾಟಿಂಗ್ ವಿವರ (ಹೆಚ್ಚು ರನ್​ ಗಳಿಸಿದ ಆಟಗಾರರು)

156 ರನ್​ಗೆ ಆಲ್​ಔಟ್​ (22.2 ಓವರ್​)
ವೈಭವ್ ಸೂರ್ಯವಂಶಿ- 26 ರನ್​ (10 ಎಸೆತ)
ದೀಪೇಶ್​ ದೇವೆಂದ್ರನ್​- 36 ರನ್​ (16 ಎಸೆತ)

ಪಾಕಿಸ್ತಾನ ಬ್ಯಾಟಿಂಗ್ ವಿವರ (ಹೆಚ್ಚು ರನ್​ ಗಳಿಸಿದ ಆಟಗಾರರು)

347 ರನ್​ 8 ವಿಕೆಟ್​ (50 ಓವರ್​)
ಸಮೀರ್​ ಮೀನಸ್​- 172 ರನ್​, 113 ಎಸೆತ
ಅಹ್ಮದ್​ ಹುಸೈನ್​- 56 ರನ್​, 72 ಎಸೆತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net