ಪಂದ್ಯದ ವಿಚಾರಕ್ಕೆ ಬರುವುದಾದರೆ, ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಸಮೀರ್ ಮಿನ್ಹಾಸ್ (172 ರನ್, 113 ಎಸೆತ, 17 ಬೌಂಡರಿ, 9 ಸಿಕ್ಸರ್) ಅವರ ಭರ್ಜರಿ ಶತಕ ಹಾಗೂ ಅಹ್ಮದ್ ಹುಸೇನ್ (56 ರನ್, 72 ಎಸೆತ, 2 ಬೌಂಡರಿ, 1 ಸಿಕ್ಸರ್) ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 347 ರನ್ ಗಳಿಸಲು ಸಾಧ್ಯವಾಯಿತು.