ಬೆಂಗಳೂರು: ಆರ್ಸಿಬಿ ತಂಡದ ಸತತ 2ನೇ ಟ್ರೋಫಿ ಗೆಲುವಿನ ನಡುವೆ ಟಿಮ್ ಡೇವಿಡ್ಗೆ (Tim David) ದಂಡ ಶಿಕ್ಷೆ ಮತ್ತು ನಿಷೇಧದ ಬರೆ ಬಿದ್ದಿದೆ.
ಗುಜರಾತ್ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನಿಂಗ್ಸ್ನ 10ನೇ ಓವರ್ನಲ್ಲಿ ವಿಕೆಟ್ ಬಿದ್ದಾಗ ಟಿಮ್ ಡೇವಿಡ್ ಅಂಪೈರ್ ನಿತಿನ್ ಮೆನನ್ ಕಡೆ ಐಸ್ ಬ್ಯಾಗ್ ಎಸೆದು ಆಕ್ರಮಣಕಾರಿ ವರ್ತನೆ ತೋರಿದ್ದರು. ಇದಕ್ಕಾಗಿ ಅವರಿಗೆ ಪಂದ್ಯ ಸಂಭಾವನೆಯ ಶೇ. 50 ದಂಡ ವಿಧಿಸಲಾಗಿದೆ ಮತ್ತು 2 ಡಿಮೆರಿಟ್ ಅಂಕ ನೀಡಲಾಗಿದೆ.
ಡೇವಿಡ್ ತನ್ನ ತಪ್ಪು ಮತ್ತು ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್ ವಿಧಿಸಿರುವ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಈ ಮುನ್ನ ಮುಂಬೈ ವಿರುದ್ಧದ 2 ಲೀಗ್ ಪಂದ್ಯಗಳ ದುರ್ವರ್ತನೆ ತೋರಿದ್ದ ಡೇವಿಡ್ಗೆ ಕ್ರಮವಾಗಿ 1, 2 ಡಿಮೆರಿಟ್ ಅಂಕ ನೀಡಲಾಗಿತ್ತು. ಈ ಅವರ ಒಟ್ಟು ಡಿಮೆರಿಟ್ ಅಂಕ 5ಕ್ಕೇರಿದೆ. ಇದರಿಂದ ಒಂದು ಪಂದ್ಯ ನಿಷೇಧ ಶಿಕ್ಷೆಗೂ ಗುರಿಯಾಗಲಿದ್ದಾರೆ. ಇದರಿಂದ ಅವರು 2027ರ ಆವೃತ್ತಿಯಲ್ಲಿ ಆರ್ಸಿಬಿ ತಂಡ ಆಡಲಿರುವ ತನ್ನ ಮೊದಲ ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.