IPL-2026: ಈ ಬಾರಿ ಪ್ಲೇಆಫ್​ ರೇಸ್​ ಲೆಕ್ಕಾಚಾರ ಜಟಿಲ! 16 ಅಂಕ ಗಳಿಸಿದರೂ ಸೇಫಲ್ಲ!

IPL-2026: ಈ ಬಾರಿ ಪ್ಲೇಆಫ್​ ರೇಸ್​ ಲೆಕ್ಕಾಚಾರ ಜಟಿಲ! 16 ಅಂಕ ಗಳಿಸಿದರೂ ಸೇಫಲ್ಲ!
IPL-2026: ಈ ಬಾರಿ ಪ್ಲೇಆಫ್​ ರೇಸ್​ ಲೆಕ್ಕಾಚಾರ ಜಟಿಲ! 16 ಅಂಕ ಗಳಿಸಿದರೂ ಸೇಫಲ್ಲ!
Published on
ಬೆಂಗಳೂರು: ಐಪಿಎಲ್​ (IPl) 2022ರಲ್ಲಿ 10 ತಂಡಗಳು ಮತ್ತು ತಲಾ 14 ಲೀಗ್​ ಪಂದ್ಯಗಳ ಟೂರ್ನಿಯಾಗಿ ಬದಲಾದ ಬಳಿಕ ಕನಿಷ್ಠ 8 ಪಂದ್ಯ ಗೆದ್ದ ಮತ್ತು 16 ಅಂಕ ಕಲೆಹಾಕಿದ ಎಲ್ಲ ತಂಡಗಳೂ ಪ್ಲೇಆಫ್​ (Play-Off) ಹಂತಕ್ಕೇರಿವೆ. 2024ರಲ್ಲಿ ಆರ್​ಸಿಬಿ ಕನಿಷ್ಠ 7 ಗೆಲುವು ಮತ್ತು 14 ಅಂಕಗಳೊಂದಿಗೆ ಪ್ಲೇಆಫ್​ಗೇರಿದ ದೃಷ್ಟಾಂತವೂ ಇದೆ. ಆದರೆ ಈ ಬಾರಿ ಪ್ಲೇಆಫ್​ ಲೆಕ್ಕಾಚಾರ ಇನ್ನಷ್ಟು ಜಟಿಲವಾಗಿದೆ. ಹೀಗಾಗಿ ಗುಜರಾತ್​ ಟೈಟಾನ್ಸ್​ ಮತ್ತು ಆರ್​ಸಿಬಿ ತಂಡಗಳು ಈಗಾಗಲೆ 8 ಪಂದ್ಯ ಗೆದ್ದು, 16 ಅಂಕ ಕಲೆಹಾಕಿದ್ದರೂ, ಪ್ಲೇಆಫ್​ ಸ್ಥಾನ ಇನ್ನೂ ಖಚಿತವಾಗಿಲ್ಲ.

ಸದ್ಯದ ಲೆಕ್ಕಾಚಾರದ ಪ್ರಕಾರ, ಒಟ್ಟು 6 ತಂಡಗಳಿಗೆ ಕನಿಷ್ಠ 16 ಅಂಕ ಗಳಿಸಲು ಅವಕಾಶವಿದೆ. ಹೀಗಾಗಿ 16 ಅಂಕ ಗಳಿಸಿದ ತಂಡವೂ ಈ ಬಾರಿ ಪ್ಲೇಆಫ್​ ಹಂತಕ್ಕೇರಲು ಸಾಧ್ಯವಾಗದಿರುವ ಸಾಧ್ಯತೆಗಳಿವೆ. ಇನ್ನು ಇನ್ನೊಂದು ಲೆಕ್ಕಾಚಾರದ ಪ್ರಕಾರ ಈ ಬಾರಿ ಕನಿಷ್ಠ 9 ಪಂದ್ಯ ಗೆದ್ದು 18 ಅಂಕ ಗಳಿಸಿದ ತಂಡಕ್ಕೂ ಪ್ಲೇಆಫ್​ ಸ್ಥಾನ ಕೈತಪ್ಪಬಹುದಾದ ಣ ಸಾಧ್ಯತೆಯೊಂದು ಕೂಡ ಇದೆ. ಯಾಕೆಂದರೆ ಈಗಿನ ಸ್ಥಿತಿಗತಿಯ ಪ್ರಕಾರ ಸದ್ಯ 5 ತಂಡಗಳಿಗೆ ಕನಿಷ್ಠ 18 ಅಂಕ ಗಳಿಸುವ ಅವಕಾಶವಿದೆ. ಹೀಗಾಗಿ ಈಗ ಅಂಕಪಟ್ಟಿಯ ಅಗ್ರ 4ರೊಳಗಿರುವ ಯಾವ ತಂಡವೂ ಪ್ಲೇಆಫ್​ ಹಂತಕ್ಕೇರಲು ಸಾಧ್ಯವಾಗದಿದ್ದರೆ ಅದರಲ್ಲಿ ಅಚ್ಚರಿ ಏನೂ ಇಲ್ಲ.

ಅದೇ ರೀತಿ ಕನಿಷ್ಠ 14 ಅಂಕ ಗಳಿಸಿದ ತಂಡವೂ ಪ್ಲೇಆಫ್​ ಹಂತಕ್ಕೇರುವ ವಿರಳ ಸಾಧ್ಯತೆಯೂ ಜೀವಂತವಿದೆ. ಟೂರ್ನಿಯಲ್ಲಿ ಇನ್ನು 13 ಲೀಗ್​ ಪಂದ್ಯ ಬಾಕಿ ಇರುವ ವೇಳೆ, ಡೆಲ್ಲಿ ಸಹಿತ 8 ತಂಡಗಳು ಪ್ಲೇಆಫ್​ ಆಸೆ ಹೊಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net