ಇದೇ ಧೋನಿಯ ಕೊನೆ ಸೀಸನ್​ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಇರ್ಫಾನ್ ಪಠಾಣ್​ ಓಪನ್​ ಟಾಕ್​

ಮಹೇಂದ್ರ ಸಿಂಗ್ ಧೋನಿ, ಇರ್ಫಾನ್ ಪಠಾಣ್​
ಮಹೇಂದ್ರ ಸಿಂಗ್ ಧೋನಿ, ಇರ್ಫಾನ್ ಪಠಾಣ್​
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ ಶುರುವಿಗೂ ಮುನ್ನವೇ ಧೋನಿ ನಿವೃತ್ತಿ ಬಗ್ಗೆ ಮಾತು
  • ಶಾಕಿಂಗ್ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​
ನವದೆಹಲಿ: ಭಾರತೀಯ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕ, ದಿಗ್ಗಜ ಕ್ರಿಕೆಟಿಗ, ಅಭಿಮಾನಿಗಳ ನೆಚ್ಚಿನ 'ಕ್ಯಾಪ್ಟನ್ ಕೂಲ್'​ ಮಹೇಂದ್ರ ಸಿಂಗ್ ಧೋನಿ ಇದೀಗ ಐಪಿಎಲ್​ 19ನೇ ಆವೃತ್ತಿಯಲ್ಲಿ ತಮ್ಮ ಅಭಿಮಾನಿಗಳ ಎದುರು ಬರಲು ಸಜ್ಜಾಗಿದ್ದಾರೆ. 44ನೇ ವಯಸ್ಸಿನಲ್ಲೂ ಸಖತ್ ಫಿಟ್​ ಆಗಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮಾಜಿ ನಾಯಕ, ಐದು ಬಾರಿ ಸಿಎಸ್​​ಕೆ ತಂಡವನ್ನು ಚಾಂಪಿಯನ್ಸ್​ ಪಟ್ಟಕ್ಕೇರಿಸಿದ್ದು ಇತಿಹಾಸ. ಸದ್ಯ ನಾಯಕತ್ವದಿಂದ ಹಿಂದೆ ಸರಿದಿರುವ ಧೋನಿ, ಫ್ಯಾನ್ಸ್​ಗಳ ಆಸೆಗೆ ಮಣಿದು ಮತ್ತೊಂದು ವರ್ಷ ಯುವ ಕ್ರಿಕೆಟಿಗರೊಡನೆ ಪೈಪೋಟಿಗಿಳಿಯಲು ಐಪಿಎಲ್​ ಕಣಕ್ಕಿಳಿಯುತ್ತಿರುವುದು ವಿಶೇಷ.
ಮಹೇಂದ್ರ ಸಿಂಗ್ ಧೋನಿ ಮತ್ತೊಂದು ಸೀಸನ್​ ಆಡುತ್ತಿದ್ದಾರೆ ಎಂಬ ವಿಷಯ ತಿಳಿದ ಅಭಿಮಾನಿಗಳು, ಸೋಮವಾರ (ಮಾ.30) ಗುವಾಹಟಿಯ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೂರನೇ ಐಪಿಎಲ್​ ಪಂದ್ಯಕ್ಕೆ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ. ಕಾರಣ, ಧೋನಿ.
ಸದಾ ಇನ್ನೊಂದು ವರ್ಷ, ಮತ್ತೊಂದು ಸೀಸನ್ ಆಡುವಂತೆ ಮಾಹಿಯನ್ನು ಪ್ರೀತಿಯಿಂದ ಕೇಳಿಕೊಳ್ಳುವ ಫ್ಯಾನ್ಸ್​ಗೆ ಅವರ ನಿವೃತ್ತಿ ಬಗ್ಗೆ ಯಾರಾದರೂ ಉಸಿರೆತ್ತಿದರೆ ಕಿಂಚಿತ್ತು ಇಷ್ಟವಾಗಲ್ಲ. ಪ್ರತಿಬಾರಿ ಧೋನಿಯ ಐಪಿಎಲ್​ ಇದೇ ಕೊನೆ ಎನ್ನುವುದು ಫೈನಲ್​ ಹತ್ತಿರವಾಗುತ್ತಿದ್ದಂತೆ ಚರ್ಚೆಗೆ ಬರುತ್ತೆ. ಆದರೆ, ಈ ಬಾರಿ ಮೊದಲೇ ಬಂದಿರುವುದು ಆಶ್ಚರ್ಯ. ಅದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ್ ಇರ್ಫಾನ್ ಪಠಾಣ್ ಅವರ ಬಾಯಿಂದ ಅನ್ನೋದು ಗಮನಾರ್ಹ.
ಸಿಎಸ್​ಕೆಗೆ ವಿಕೆಟ್​ ಕೀಪರ್​ ಹಾಗೂ ಬ್ಯಾಟರ್​ ಆಗಿರುವ ಸಂಜು ಸ್ಯಾಮ್ಸನ್​ ಆಗಮನವನ್ನು ಮುಂದಿಟ್ಟು ಮಾತನಾಡಿದ ಪಠಾಣ್​, ಧೋನಿ ಅವರನ್ನು ಹೋಲುವ ಎಲ್ಲ ಕ್ವಾಲಿಟಿ ಸ್ಯಾಮ್ಸನ್​ ಅವರಲ್ಲಿದೆ. ಈ ವರ್ಷ ಧೋನಿ ಅವರ ಕಡೆಯ ಐಪಿಎಲ್​ ಸೀಸನ್​. ಇದು ಕೊನೆಯದಾಗಿ ದಿಗ್ಗಜ ಕ್ರಿಕೆಟಿಗನಿಗೆ ಬೀಳ್ಕೊಡುವ ಸಮಯ. ಇದಕ್ಕೆ ಒಂದಷ್ಟು ಬೆಳವಣಿಗೆಗಳೇ ಪುಷ್ಠಿ ಎಂದು ಹೇಳಿದರು.
ಈಗ ಚೆನ್ನೈ ಸೆಟ್​ಅಪ್​ ನೋಡಿದರೆ, ಸಾಕಷ್ಟು ಬದಲಾವಣೆ ಆಗಿದೆ. ಸಿಎಸ್​ಕೆ ಪರ ಮುಂದಿನ ಐದು ವರ್ಷ ಆಡುವಂತಹ ವಿಕೆಟ್​ ಕೀಪರ್​-ಬ್ಯಾಟರ್​ ಅನ್ನೇ ತಂಡಕ್ಕೆ ತರಲಾಗಿದೆ. ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಫ್ರಾಂಚೈಸಿ ಈ ನಿರ್ಧಾರವನ್ನು ಕೈಗೊಂಡಿದೆ ಅನಿಸುತ್ತಿದೆ. ಸಂಜು ಸ್ಯಾಮ್ಸನ್​ ಮುಂದಿನ ಸಿಎಸ್​ಕೆ ಮುಖವಾಣಿ. ಧೋನಿ ಈಗ ಬ್ಯಾಟನ್​ ಅನ್ನು ತಮ್ಮಷ್ಟೇ ಪ್ರಭಾವ ಬೀರುವ ಹಾಗೂ ಅಭಿಮಾನಿಗಳೊಂದಿಗೆ ಉತ್ತಮ ಸಂಬಂಧ, ಸಂಪರ್ಕ ಹೊಂದುವ ವ್ಯಕ್ತಿಗೆ ಪಾಸ್​ ಮಾಡಲು ನೋಡುತ್ತಿದ್ದಾರೆ. ಪ್ರಸ್ತುತ, ಸಂಜು ಎಂಟ್ರಿ ನೋಡಿದರೆ, ಅವರೇ ಸೂಕ್ತ ಎಂದು ಮಾಹಿ ಬ್ಯಾಟನ್ ಕೊಟ್ಟರೂ ಆಶ್ಚರ್ಯವಿಲ್ಲ. ನನ್ನ ಪ್ರಕಾರ, ನಿವೃತ್ತಿಗೆ ಇದು ಅವರಿಗೆ ಸೂಕ್ತ ಸಮಯ ಎಂದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net