ಗಂಟೆಗೆ 150 ಕಿಮೀ ವೇಗ! ಅಕ್ಷರ್ ಪಟೇಲ್​ ಪಡೆಗೆ ಈ ವೇಗಿಯದ್ದೇ ಭಯ; ಅಪ್ಟೇಟ್​ ಕೊಟ್ಟ ಎಲ್​ಎಸ್​ಜಿ ಕೋಚ್​​ | LSG vs DC

ಎಲ್​ಎಸ್​ಜಿ ತಂಡದ ವೇಗಿ ಮಯಾಂಕ್ ಯಾದವ್​
ಎಲ್​ಎಸ್​ಜಿ ತಂಡದ ವೇಗಿ ಮಯಾಂಕ್ ಯಾದವ್​
Published on

ಪ್ರಮುಖ ಮುಖ್ಯಾಂಶಗಳು

  • ಇಂದು (ಏ.01) ಲಖನೌ ಸೂಪರ್ ಜೈಂಟ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಐದನೇ ಐಪಿಎಲ್​ ಪಂದ್ಯ
  • ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡು ವೇಗಿಯ ಬಗ್ಗೆ ಲಖನೌ ಕೋಚ್​ ಮಾಹಿತಿ
LSG vs DC: ಮಾ.28ರಿಂದ ಆರಂಭಗೊಂಡ ಐಪಿಎಲ್​ 19ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ ನಡೆದಿರುವ ಪಂದ್ಯಗಳು ರೋಚಕತೆಗೆ ಸಾಕ್ಷಿಯಾಗುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯ ಮಾತ್ರ ಒಂದು ಸೈಡೆಡ್​ ಆಗಿದ್ದು ಬಿಟ್ಟರೆ, ಉಳಿದೆಲ್ಲ ಪಂದ್ಯಗಳು ಕ್ರಿಕೆಟ್​ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡಿತು. 
ಇಂದು ಏಕಾನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ನಡುವಿನ ಐದನೇ ಐಪಿಎಲ್​  ಪಂದ್ಯಕ್ಕೆ ಎರಡೂ ತಂಡಗಳು ಭರ್ಜರಿ ಪೈಪೋಟಿ ನೀಡಲು ಸಜ್ಜಾಗಿವೆ. ಅಕ್ಷರ್​ ಪಟೇಲ್​ ಕ್ಯಾಪ್ಟನ್ಸಿಯಲ್ಲಿ ಕಣಕ್ಕಿಳಿಯಲಿರುವ ಡೆಲ್ಲಿ ಪಡೆಗೆ ರಿಷಭ್ ಪಂತ್ ತಂಡದ ಆ ಒಬ್ಬ ಬೌಲರ್​ ಮೇಲೆ ಸಂಪೂರ್ಣ ಗಮನ ಹೋದಂತಿದೆ. ಕಾರಣ, ಕಳೆದ ಕೆಲವು ಸೀಸನ್​ನಲ್ಲಿ ಆತ ಮಾಡಿದ ವೇಗದ ಮ್ಯಾಜಿಕ್​.   
ಲಖನೌ ಪಡೆಯ ಬೌಲಿಂಗ್​ಗೆ ದೊಡ್ಡ ಶಕ್ತಿಯಾಗಿರುವ ಈ ಯುವ ವೇಗಿ ಮಯಾಂಕ್ ಯಾದವ್​, ಇಂಜುರಿಯಿಂದ ಕಳೆದ ನಾಲ್ಕು ವರ್ಷಗಳಿಂದ ಆಟದಿಂದ ಹೊರಗುಳಿದಿದ್ದಾರೆ. ಈ ವರ್ಷ ತಂಡಕ್ಕೆ ಕಮ್​ಬ್ಯಾಕ್​ ಮಾಡಿರುವ ಅವರ ಆಟ ಹೇಗಿರಲಿದೆ? ಅಷ್ಟಕ್ಕೂ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆಯೇ? ಮೊದಲ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ? ಎಂಬುದರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಆದರೀಗ, ತಂಡದ ಹೆಡ್​ ಕೋಚ್ ಜಸ್ಟಿನ್ ಲ್ಯಾಂಗರ್ ಇದಕ್ಕೆ ಉತ್ತರಿಸಿದ್ದಾರೆ. 
ವೇಗಿಗಳಾದ ಮಯಾಂಕ್ ಯಾದವ್ ಮತ್ತು ನಮನ್ ತಿವಾರಿ ಈಗ ಫಿಟ್ ಆಗಿದ್ದಾರೆ. ಅವರೆಲ್ಲರೂ ಅದ್ಭುತ ಆಟಗಾರರು ಮತ್ತು ಅವರಿಗೆ ಉಜ್ವಲ ಭವಿಷ್ಯವಿದೆ. ಇವರಿಬ್ಬರೂ ಮೊದಲ ಪಂದ್ಯದಲ್ಲಿ ಆಡಲಿದ್ದಾರೆ ಹಾಗೂ ಬಹಳ ಕಾತುರದಿಂದ ನಾವೆಲ್ಲರೂ ಕಾಯುತ್ತಿದ್ದೇವೆ. ಇವರಿಬ್ಬರ ಜೊತೆಗೆ, ಮೊಹ್ಸಿನ್ ಖಾನ್, ಮೊಹಮ್ಮದ್ ಶಮಿ ಮತ್ತು ಆಕಾಶ್ ಸಿಂಗ್ ಅವರಂತಹ ಪ್ರತಿಭಾನ್ವಿತ ವೇಗಿಗಳು ತಂಡದಲ್ಲಿದ್ದಾರೆ.
ಇಂಜುರಿಯಿಂದ ಬಹುತೇಕ ಪಂದ್ಯಗಳನ್ನು ಮಿಸ್​ ಮಾಡಿಕೊಂಡಿರುವ ಮಯಾಂಕ್​, ಇಂದಿನ ಪಂದ್ಯದ ಮೂಲಕ ತಂಡಕ್ಕೆ ಭರ್ಜರಿ ಕಮ್​ಬ್ಯಾಕ್ ಮಾಡಲು ಎದುರುನೋಡುತ್ತಿದ್ದಾರೆ. ಆಡಿರುವ ಎರಡು ಸೀಸನ್​ಗಳಲ್ಲಿ ಎಲ್​ಎಸ್​ಜಿ ಪರ ಕೇವಲ 6 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. 20.55 ಸರಾಸರಿಯಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್​ 3/14 ಎಂಬುದು ಇಲ್ಲಿ ಗಮನಾರ್ಹ. ಇಂದಿನ ಪಂದ್ಯದಲ್ಲಿ ಗಂಟೆಗೆ 150 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಲಿದ್ದಾರೆ? ಎಷ್ಟು ವಿಕೆಟ್​ ಪಡೆಯುಬಹುದು? ಎಂಬದುನ್ನು ಕಾದು ನೋಡಬೇಕು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net