"ಅವರಿಗೆ ಆ ಗಟ್ಸ್​ ಇಲ್ಲ..." ಟಿ20 ವಿಶ್ವಕಪ್​ ಬಹಿಷ್ಕರಿಸಲು ಮುಂದಾದ ಪಾಕ್​ಗೆ ಅಜಿಂಕ್ಯಾ ರಹಾನೆ ಸವಾಲು

ಟೀಮ್ ಇಂಡಿಯಾ ಆಟಗಾರ ಅಜಿಂಕ್ಯಾ ರಹಾನೆ
ಟೀಮ್ ಇಂಡಿಯಾ ಆಟಗಾರ ಅಜಿಂಕ್ಯಾ ರಹಾನೆ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ನಲ್ಲಿ ಆಡುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದ ಪಿಸಿಬಿ
  • ನಿರ್ಧಾರ ಹೇಳಲು ಹೈಡ್ರಾಮಾ ಜತೆಗೆ ವಿಶ್ವಕಪ್​ ಟೂರ್ನಿ ಬಹಿಷ್ಕರಿಸಲು ಪಾಕ್​ ಚಿಂತನೆ
  • ವಿಶ್ವಕಪ್​ ಅನ್ನು ಬಹಿಷ್ಕರಿಸುವ ತಾಕತ್ತು ಅವರಿಗಿಲ್ಲ ಎಂದ ಟೀಮ್ ಇಂಡಿಯಾ ಆಟಗಾರ
ನವದೆಹಲಿ: ಭಾರತಕ್ಕೆ ನಾವು ಪ್ರವಾಸ ಮಾಡಲ್ಲ ಎಂದಿದ್ದ ಬಿಸಿಬಿಯನ್ನು ಕಡೆಗೂ ಐಸಿಸಿ ವಿಶ್ವಕಪ್ ಟೂರ್ನಿಯಿಂದ ಕಿತ್ತುಬಿಸಾಡಿದೆ. ಈ ಮಧ್ಯೆ, ಹೊಸ ಹೈಡ್ರಾಮಾ ಮುಂದುವರಿಸಿರುವ ಪಾಕಿಸ್ತಾನ, ವಿಶ್ವಕಪ್​ ಆಡಬೇಕೋ, ಬೇಡವೋ ಎಂಬ ನಿರ್ಧಾರವನ್ನು ಶುಕ್ರವಾರ (ಜ.30) ಅಥವಾ ಸೋಮವಾರ ಹೇಳುತ್ತೇವೆ ಎಂದು ತಮ್ಮ ಹೈಡ್ರಾಮಾ ಮುಂದುವರಿಸಿರುವುದು ಸದ್ಯ ಹಲವರನ್ನು ಕೆರಳಿಸಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಮೊಹ್ಸಿನ್ ನಖ್ವಿ ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ದೇಶದ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ಭೇಟಿಯಾಗಿದ್ದು, ಟಿ20 ವಿಶ್ವಕಪ್​ ಟೂರ್ನಿಯಿಂದ ಐಸಿಸಿ ಬಾಂಗ್ಲಾದೇಶವನ್ನು ಹೊರಗಿಟ್ಟ ಹಿನ್ನೆಲೆ, ತಮ್ಮ ತಂಡ ಕೂಡ ಟೂರ್ನಿಯನ್ನು ಕೈಬಿಡುವ ಬಗ್ಗೆ ಪ್ರಧಾನಿಯೊಂದಿಗೆ ಚರ್ಚಿಸಿದ್ದಾಗಿ ತಿಳಿಸಿದ್ದಾರೆ.
ದೀರ್ಘಕಾಲದ ಚರ್ಚೆಯ ಬಳಿಕ ಈ ವಿಚಾರದಲ್ಲಿ ತಮ್ಮ ನಿರ್ಧಾರವನ್ನು ಜ.30 ಅಥವಾ ಫೆ.02ರಂದು ತಿಳಿಸುವುದಾಗಿ ಪಾಕ್​ ಹೇಳಿದೆ. ಈ ವಿಷಯದಿಂದ ಕೆರಳಿರುವ ಟೀಮ್ ಇಂಡಿಯಾ ಆಟಗಾರ ಅಜಿಂಕ್ಯಾ ರಹಾನೆ, ಪಾಕಿಸ್ತಾನ ವಿರುದ್ಧ ಗುಡುಗಿದ್ದಾರೆ.
ಪಾಕಿಸ್ತಾನವು ಟೂರ್ನಿಯಿಂದ ಸಂಪೂರ್ಣವಾಗಿ ಹಿಂದೆ ಸರಿಯದಿದ್ದರೂ, ಫೆ.15ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂಬ ವರದಿಗಳು ಸದ್ಯ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದರ ಬೆನ್ನಲ್ಲೇ ಕಿಡಿಕಾರಿರುವ ಅಜಿಂಕ್ಯಾ ರಹಾನೆ, "ನನಗೆ ಅನಿಸೋದು ಅವರಿಂದ ಇದು ಸಾಧ್ಯವಿಲ್ಲ ಅಂತ. ಅವರಿಗೆ ಆ ಗಟ್ಸ್​ ಇಲ್ಲ" ಎಂದಿದ್ದಾಗಿ 'ಕ್ರಿಕ್​ಬಜ್'​ ವರದಿ ಹೇಳಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net