2028ರ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದ ತಂಡಗಳನ್ನು ಪ್ರಕಟಿಸಿದ ಐಸಿಸಿ! ಬಾಂಗ್ಲಾದೇಶ ಸ್ಥಾನ ಗಿಟ್ಟಿಸಿದ್ಹೇಗೆ? T20 World Cup 2028

2028ರ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದ ತಂಡಗಳು ಪ್ರಕಟ ( T20 World Cup 2028 )
2028ರ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದ ತಂಡಗಳು ಪ್ರಕಟ ( T20 World Cup 2028 )
Published on

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ( ICC ) ಪ್ರಮುಖ ಅಪ್​ಡೇಟ್​ ಒಂದನ್ನು ನೀಡಿದೆ
  • ಮುಂದಿನ ಟಿ20 ವಿಶ್ವಕಪ್-2028ಕ್ಕೆ ಅರ್ಹತೆ ಪಡೆದ 12 ತಂಡಗಳನ್ನು ಐಸಿಸಿ ಅಧಿಕೃತವಾಗಿ ಘೋಷಿಸಿದೆ
  • 2028ರ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ ಎಂದು ಐಸಿಸಿ ತಿಳಿಸಿದೆ
T20 World Cup 2028 : ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್-2026ರಲ್ಲಿ ಸೂಪರ್-8 ಹಂತವನ್ನು ತಲುಪಿರುವ ತಂಡಗಳನ್ನು ಘೋಷಿಸಲಾಗಿದ್ದು, ವೇಳಾಪಟ್ಟಿಯನ್ನು ಸಹ ಪ್ರಕಟಿಸಲಾಗಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ( ICC ) ಪ್ರಮುಖ ಅಪ್​ಡೇಟ್​ ಒಂದನ್ನು ನೀಡಿದೆ. ಅದೇನೆಂದರೆ, ಮುಂದಿನ ಟಿ20 ವಿಶ್ವಕಪ್-2028ಕ್ಕೆ ಅರ್ಹತೆ ಪಡೆದ 12 ತಂಡಗಳನ್ನು ಐಸಿಸಿ ಅಧಿಕೃತವಾಗಿ ಘೋಷಿಸಿದೆ.
2026ರ ಟಿ20 ವಿಶ್ವಕಪ್‌ನ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದ ಭಾರತ, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ವೆಸ್ಟ್ ಇಂಡೀಸ್, ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಹಾಗೂ ಆತಿಥೇಯ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು 2028ರ ಟಿ20 ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದಿವೆ ಎಂದು ಐಸಿಸಿ ಪ್ರಕಟಿಸಿದೆ.
ಈ ದೇಶಗಳ ಜೊತೆಗೆ, ಬಾಂಗ್ಲಾದೇಶ, ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ಕೂಡ ಟಿ20 ರ್ಯಾಕಿಂಗ್​ ಆಧಾರದ ಮೇಲೆ ತಮ್ಮ ಸ್ಥಾನಗಳನ್ನು ಪಡೆದುಕೊಂಡಿವೆ. ಟಿ20 ರ್ಯಾಂಕಿಂಗ್​ ಕಟ್-ಆಫ್ ದಿನಾಂಕವನ್ನು ಟಿ20 ವಿಶ್ವಕಪ್ 2026ರ ಫೈನಲ್ ಎಂದು ನಿಗದಿಪಡಿಸಲಾಗಿದೆ. ಮಾರ್ಚ್ 9 ರವರೆಗೆ ರ್ಯಾಕಿಂಗ್​ ಮೇಲೆ ಪರಿಣಾಮ ಬೀರುವ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳು ಇಲ್ಲದ ಕಾರಣ, ಈ ಮೂರು ತಂಡಗಳು ಟಿ20 ವಿಶ್ವಕಪ್ 2028ಕ್ಕೆ ಅರ್ಹತೆ ಪಡೆದಿವೆ.
2028ರ ಟಿ20 ವಿಶ್ವಕಪ್‌ನಲ್ಲಿ 20 ತಂಡಗಳು ಭಾಗವಹಿಸಲಿವೆ ಎಂದು ಐಸಿಸಿ ತಿಳಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ನಡೆಯಲಿರುವ ಅರ್ಹತಾ ಪಂದ್ಯಗಳ ಆಧಾರದ ಮೇಲೆ ಉಳಿದ 8 ತಂಡಗಳನ್ನು ನಿರ್ಧರಿಸಲಾಗುತ್ತದೆ.

ಅರ್ಹತೆ ಪಡೆದ 12 ತಂಡಗಳು ಈ ಕೆಳಕಂಡಂತಿವೆ...

* ಭಾರತ
* ಆಸ್ಟ್ರೇಲಿಯಾ
* ನ್ಯೂಜಿಲೆಂಡ್
* ದಕ್ಷಿಣ ಆಫ್ರಿಕಾ
* ಜಿಂಬಾಬ್ವೆ
* ವೆಸ್ಟ್ ಇಂಡೀಸ್
* ಇಂಗ್ಲೆಂಡ್
* ಪಾಕಿಸ್ತಾನ
* ಶ್ರೀಲಂಕಾ
* ಬಾಂಗ್ಲಾದೇಶ
* ಅಫ್ಘಾನಿಸ್ತಾನ
* ಐರ್ಲೆಂಡ್
2028ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಟೂರ್ನಿಯನ್ನು ದ್ವೀಪ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಜಂಟಿಯಾಗಿ ಆಯೋಜನೆ ಮಾಡಲಿವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net