ಪ್ರಸ್ತುತ 11 ಪಂದ್ಯಗಳನ್ನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. +1.103 ನಿವ್ವಳ ರನ್ ರೇಟ್ ಹೊಂದಿದ್ದು, ಇದು ಇತರ ತಂಡಗಳಿಗಿಂತ ಉತ್ತಮವಾಗಿದೆ. ಆದರೂ, ಪ್ಲೇಆಫ್ ಸ್ಥಾನ ಅಧಿಕೃತವಾಗಿ ಖಚಿತಪಡಿಸಲು ಇನ್ನೂ ಎರಡು ಗೆಲುವುಗಳ ಅಗತ್ಯವಿದೆ. ಸಾಮಾನ್ಯವಾಗಿ ಪ್ಲೇಆಫ್‌ಗೆ ಲಗ್ಗೆಯಿಡಲು 16 ಪಾಯಿಂಟ್ಸ್ ಬೇಕು. ಹೀಗಾಗಿ, ಒಂದು ಪಂದ್ಯ ಗೆದ್ದರೂ ಸಾಕು. ಎರಡೂ ಮ್ಯಾಚ್ಗಳನ್ನು ಆರ್‌ಸಿಬಿ ಗೆದ್ದರೆ, ಅಗ್ರ 2ರಲ್ಲಿ ಸ್ಥಾನ ಪಡೆದು ನೇರವಾಗಿ ಕ್ವಾಲಿಫೈಯರ್-1ಗೆ ಅರ್ಹತೆ ಪಡೆಯುವ ಅವಕಾಶವಿದೆ.