ಈ ವರ್ಷದ ಐಪಿಎಲ್ ನಂತರ ತವರಿನಲ್ಲಿ ಕೊಹ್ಲಿ ಆಡಿದ ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ. ತಂಡಕ್ಕೆ ಕಮ್ಬ್ಯಾಕ್ ಮಾಡಿದ ವಿರಾಟ್ ಮೇಲೆ ಕ್ರಿಕೆಟ್ ಪ್ರೇಮಿಗಳಿಂದ ಅಪಾರ ನಿರೀಕ್ಷೆ ಮತ್ತು ಕುತೂಹಲ ಮೂಡಿತ್ತು. ಅಂತೆಯೇ, ಕೊಹ್ಲಿ ತಮ್ಮ ಅಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದ ಆ ನಿರೀಕ್ಷೆಗಳನ್ನು ಈಡೇರಿಸಿದರು. ಆದರೆ, ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್ ರೂಮ್ನತ್ತ ಸಾಗುತ್ತಿದ್ದ ಕಿಂಗ್ ಕೊಹ್ಲಿ, ಎದುರಿಗೆಯೇ ಕುಳಿತಿದ್ದ ಗೌತಮ್ ಗಂಭೀರ್ರನ್ನು ನೋಡದೆ, ತಮ್ಮ ಮೊಬೈಲ್ ನೋಡುತ್ತ ಸಾಗಿದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿದೆ.