ಕೆಕೆಆರ್ ನೆಟ್ ರನ್ ರೇಟ್ ಸುಧಾರಿಸಬೇಕಿದೆ: 19ನೇ ಆವೃತ್ತಿಗೂ ಮುನ್ನ ಕೋಲ್ಕತಾ ತಂಡಕ್ಕೆ ರೈನಾ ಎಚ್ಚರಿಕೆ! IPL 2026
IPL 2026 (ಚಿತ್ರ X)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಐಪಿಎಲ್ನ 19 ನೇ ಆವೃತ್ತಿಯ ಆರಂಭಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ
ಪ್ರತಿ ಸೀಸನ್ನಂತೆ ಈ ಬಾರಿಯೂ ಯಾವ ತಂಡ ಬಲಿಷ್ಠವಾಗಿದೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ
ಕಳೆದ ಸೀಸನ್ನಲ್ಲಿ ತಂಡದ ಮಧ್ಯಮ ಕ್ರಮಾಂಕವು ತಂಡಕ್ಕೆ ರನ್ ಗಳಿಸಲು ಪರದಾಡಿದ್ದನ್ನು ನೆನಪಿಸಿದ ರೈನಾ
ಈ ಬಾರಿ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರಿಗೆ ಕ್ರಮಾಂಕದಲ್ಲಿ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು
IPL 2026: ಐಪಿಎಲ್ನ 19 ನೇ ಆವೃತ್ತಿಯ ಆರಂಭಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಪ್ರತಿ ಸೀಸನ್ನಂತೆ ಈ ಬಾರಿಯೂ ಯಾವ ತಂಡ ಬಲಿಷ್ಠವಾಗಿದೆ ಮತ್ತು ಯಾವ ಆಟಗಾರ ಯಾವ ಕ್ರಮಾಂಕದಲ್ಲಿ ಆಡಬೇಕು ಎಂಬ ಚರ್ಚೆ ಜೋರಾಗಿ ಸದ್ದು ಮಾಡುತ್ತಿವೆ. ಈ ಮಧ್ಯೆ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಮೂರು ಬಾರಿಯ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಳೆದ ಸೀಸನ್ನಲ್ಲಿ ತಂಡದ ಮಧ್ಯಮ ಕ್ರಮಾಂಕವು ತಂಡಕ್ಕೆ ರನ್ ಗಳಿಸಲು ಪರದಾಡಿದ್ದನ್ನು ನೆನಪಿಸಿದ ರೈನಾ, ಈ ಬಾರಿ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ ಅವರಿಗೆ ಕ್ರಮಾಂಕದಲ್ಲಿ ಬಡ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಕಳೆದ ಬಾರಿ ಕೆಕೆಆರ್ ತಂಡದ ರನ್ ರೇಟ್ ಅಷ್ಟೊಂದು ಚೆನ್ನಾಗಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದಿರುವುದು. ಆದಾಗ್ಯೂ, ರಸೆಲ್, ರಮಣ್‌ದೀಪ್ ಮತ್ತು ರಿಂಕು ಸಿಂಗ್ ಅವರು 7,8,9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುತ್ತಿದ್ದರು.
ರಿಂಕು ಸಿಂಗ್ ಕೇವಲ ಕೊನೆಯಲ್ಲಿ ಬಂದು ಸಿಕ್ಸರ್ ಬಾರಿಸುವ ಸ್ಲಾಗರ್ ಅಲ್ಲ. ಹಾಗಾಗಿ ಅವರು 4 ನೇ ಸ್ಥಾನದಲ್ಲಿ ಬರಬಹುದು. ಈಗಾಗಲೇ ಅವರು ಅನೇಕ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಆದ್ದರಿಂದ ಅವರು ದೀರ್ಘ ಇನ್ನಿಂಗ್ಸ್ ಆಡಬಹುದು. ಜೊತೆಗೆ ರಘುವಂಶಿ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ರೈನಾ ಹೇಳಿದ್ದಾರೆ.
ಕೆಕೆಆರ್ ತಂಡದ ಬ್ಯಾಟಿಂಗ್ ಬಗ್ಗೆ ಅಭಿಪ್ರಾಯ ಸೂಚಿಸಿದ ಸಂಜಯ್ ಬಂಗಾರ್ ಮೂರು ಬಾರಿಯ ಚಾಂಪಿಯನ್ ತಂಡವು ಯಶಸ್ವಿಯಾಗಬೇಕಾದರೆ, ಅನುಭವಿ ಆಲ್ರೌಂಡರ್ ಸುನಿಲ್ ನರೈನ್ ಅವರನ್ನೇ ಆರಂಭಿಕ ಆಟಗಾರರಾಗಿ ಕಣಕ್ಕಿಳಿಸಬೇಕು ಎಂದು ಹೇಳಿದ್ದಾರೆ.
ನೀವು ಎಷ್ಟೇ ಲೆಕ್ಕಾಚಾರ ಮಾಡಿದರೂ ಸುನಿಲ್ ನರೈನ್, ರಹಾನೆಗಿಂತ ಅಗ್ರ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಕ್ಯಾಮರೂನ್ ಗ್ರೀನ್ ಅವರನ್ನು 3 ನೇ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿಸಬಹುದು. ಕೆಳ ಕ್ರಮಾಂಕದಲ್ಲಿ ರಿಂಕು ಸಿಂಗ್, ರೋವ್ಮನ್ ಪೊವೆಲ್ ಮತ್ತು ರಮಣದೀಪ್ ಇದ್ದಾರೆ ಎಂದು ಬಂಗಾರ್ ಹೇಳಿದರು (ಏಜೆನ್ಸೀಸ್).