Rishabh Pant : ಮುಲ್ಲನ್‌ಪುರದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾ ಬ್ಯಾಟರ್ ರಿಷಭ್ ಪಂತ್ ಅವರು 28 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿದ್ದಾಗ ಹೊಡೆದ ಭರ್ಜರಿ ಶಾಟ್ ನೇರವಾಗಿ ಮೈದಾನದ ಮೇಲೆ ಹಾರಾಡುತ್ತಿದ್ದ ಡ್ರೋನ್‌ಗೆ ಬಡಿದು ಅದು ಕೆಳಗೆ ಬಿದ್ದಿದೆ ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ಆದರೆ, ವಾಸ್ತವವಾಗಿ ಇದು ಎಐ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾದ ಸಂಪೂರ್ಣ ನಕಲಿ ವಿಡಿಯೋ ಆಗಿದ್ದು, ನೆಟ್ಟಿಗರನ್ನು ಹಾದಿ ತಪ್ಪಿಸುತ್ತಿದೆ.