ಸಾನಿಯಾಗೆ ಕೈಕೊಟ್ಟ ಬಳಿಕ 2024, ಜನವರಿ 20ರಂದು ಪಾಕ್ ನಟಿ ಸನಾ ಜಾವೇದ್ ಎಂಬ ಮಹಿಳೆಯನ್ನು ವಿವಾಹವಾದರು. ಆದರೆ, ಈಗ ಇಬ್ಬರ ನಡುವೆ ಬಿರುಕು ಉಂಟಾಗಿದೆ ಎಂಬ ವರದಿಗಳಿವೆ. ಅದಕ್ಕಾಗಿಯೇ ಮಲಿಕ್ ಅವರು ನಾಲ್ಕನೇ ಬಾರಿಗೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ. ಫೆಬ್ರವರಿ 27 ರಂದು ಪಾಕಿಸ್ತಾನದ ಪ್ರಸಿದ್ಧ ನಟಿ ವನಿಜಾ ಸತ್ತಾರ್ ಅವರನ್ನು ಮದುವೆಯಾಗಲು ಸಿದ್ಧರಾಗುತ್ತಿದ್ದಾರೆ ಎಂಬ ವರದಿಗಳಿವೆ. ಆದರೆ, ಕೇವಲ ವದಂತಿಯಷ್ಟೇ, ಇದು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್).