ಕ್ರಿಕೆಟ್​ ಇತಿಹಾಸದಲ್ಲೇ ಅತಿದೊಡ್ಡ ನೋ-ಬಾಲ್​ ಎಸೆದ ಪಾಕ್​ ಆಟಗಾರ: ಖಂಡಿತ ಇದು ಅದೇ ಎಂದ ನಟ್ಟಿಗರು! Biggest No Ball

ಕ್ರಿಕೆಟ್​ ಇತಿಹಾಸದಲ್ಲೇ ಅತಿದೊಡ್ಡ ನೋ-ಬಾಲ್​ ಎಸೆದ ಪಾಕ್​ ಆಟಗಾರ: ಖಂಡಿತ ಇದು ಅದೇ ಎಂದ ನಟ್ಟಿಗರು! Biggest No Ball
ಕ್ರಿಕೆಟ್​ ಇತಿಹಾಸದಲ್ಲೇ ಅತಿದೊಡ್ಡ ನೋ-ಬಾಲ್​ ಎಸೆದ ಪಾಕ್​ ಆಟಗಾರ: ಖಂಡಿತ ಇದು ಅದೇ ಎಂದ ನಟ್ಟಿಗರು! Biggest No Ball
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದ ವೇಗದ ಬೌಲರ್ ಅಸಾದ್ ಅತಿದೊಡ್ಡ ನೋ-ಬಾಲ್ ಎಸೆದಿದ್ದಾರೆ
  • ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ನೋ-ಬಾಲ್ ಎಸೆದು ಕಳಪೆ ದಾಖಲೆ
  • ಪಾಕಿಸ್ತಾನದ ದೇಶೀಯ ಟಿ20 ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ನಡೆದ ಘಟನೆ
Biggest No Ball : ಪಾಕಿಸ್ತಾನದ ವೇಗದ ಬೌಲರ್ ಅಸಾದ್ ಅಖ್ತರ್ ಅವರು ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ನೋ-ಬಾಲ್ ಎಸೆದ ಕಳಪೆ ದಾಖಲೆಯನ್ನು ಬರೆದಿದ್ದಾರೆ.
ಪಾಕಿಸ್ತಾನದ ದೇಶೀಯ ಟಿ20 ಕ್ರಿಕೆಟ್ ಪಂದ್ಯಾವಳಿಯ ಸಂದರ್ಭದಲ್ಲಿ ಪೇಶಾವರದಲ್ಲಿ ಕರಾಚಿ ಬ್ಲೂಸ್ ಮತ್ತು ಲಾಹೋರ್ ಬ್ಲೂಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ, ಕರಾಚಿ ಬ್ಲೂಸ್ ಪರ ಆಡಿದ ಅಸಾದ್ ಅಖ್ತರ್ ಅತಿದೊಡ್ಡ ನೋ-ಬಾಲ್ ಎಸೆದರು.
ಕ್ರೀಸ್ ಗೆರೆಯಿಂದ ತನ್ನ ಕಾಲನ್ನು ಮುಂದಕ್ಕೆ ಚಾಚಿ ಚೆಂಡನ್ನು ಎಸೆದರು. ಇದು ಅತಿದೊಡ್ಡ ನೋಬಾಲ್​ ಆಗಿದ್ದು, ಇದನ್ನು ಉದ್ದೇಶಪೂರ್ವಕವಾಗಿ ಎಸೆದರೋ ಅಥವಾ ಆಕಸ್ಮಿಕವಾಗಿ ಎಸೆದರೋ ಎಂಬುದು ತಿಳಿದಿಲ್ಲ, ಆದರೆ ಈ ವಿಚಿತ್ರ ನೋ-ಬಾಲ್ ಈಗ ವಿವಾದವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ನಂತರ ವೈರಲ್ ಆಗಿದೆ. ತಮ್ಮ ಓವರ್‌ನಲ್ಲಿ ಅಸದ್ ಅವರು ಎರಡು ನೋ-ಬಾಲ್‌ಗಳು ಮತ್ತು ಎರಡು ವೈಡ್‌ಗಳು ಸೇರಿದಂತೆ ಒಟ್ಟು 21 ರನ್‌ಗಳನ್ನು ಬಿಟ್ಟುಕೊಟ್ಟರು ಎಂಬುದು ಗಮನಾರ್ಹ.
ಆದಾಗ್ಯೂ, ಅನೇಕರು ಅಸದ್ ಅಖ್ತರ್ ಅವರ ನೋ-ಬಾಲ್ ಅನ್ನು 2010 ರಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಿ ಬೌಲರ್ ಮೊಹಮ್ಮದ್ ಅಮೀರ್ ಎಸೆದ ನೋ-ಬಾಲ್‌ಗೆ ಹೋಲಿಸುತ್ತಿದ್ದಾರೆ. ಅಮೀರ್​ ಎಸೆದಿದ್ದ ನೋ-ಬಾಲ್​ ಸ್ಪಾಟ್ ಫಿಕ್ಸಿಂಗ್‌ನ ಭಾಗವಾಗಿತ್ತು. ಹೀಗಾಗಿ, ಐಸಿಸಿ ಅಂದಿನ ನಾಯಕ ಸಲ್ಮಾನ್ ಬಟ್ ಮತ್ತು ಮೊಹಮ್ಮದ್ ಆಸಿಫ್ ಜೊತೆಗೆ ಅಮೀರ್ ಅವರನ್ನು ನಿಷೇಧಿಸಿತು. ನಂತರ ಮೂವರಿಗೂ ಜೈಲು ಶಿಕ್ಷೆ ವಿಧಿಸಲಾಯಿತು.
ಇದೀಗ ಅಸದ್ ಅಖ್ತರ್ ಎಸೆದ ನೋ-ಬಾಲ್ ಕೂಡ ಸ್ಪಾಟ್​ ಫಿಕ್ಸಿಂಗ್​ ವಿವಾದವನ್ನು ಮುನ್ನೆಲೆಗೆ ತಂದಿದೆ. ಸಾಮಾಜಿಕ ಜಾಲತಾಣದಲ್ಲಿ ಫಿಕ್ಸಿಂಗ್​ ಎಂದು ಆರೋಪಿಸುತ್ತಿದ್ದಾರೆ. ಇನ್ನು ಈ ಘಟನೆಯ ನಂತರ, ಅಬ್ದುಲ್ ರಝಾಕ್, ಪಾಕಿಸ್ತಾನಿ ಟಿವಿ ಕಾರ್ಯಕ್ರಮವೊಂದರಲ್ಲಿ 2010ರ ಸ್ಪಾಟ್ ಫಿಕ್ಸಿಂಗ್ ಹಗರಣದ ಬಗ್ಗೆ ಪ್ರಮುಖ ವಿವರಗಳನ್ನು ಬಹಿರಂಗಪಡಿಸಿದರು. ಮೊಬೈಲ್ ಫೋನ್ ರಿಪೇರಿ ಮೂಲಕ ಹಗರಣದ ಹಿಂದಿನ ಪಿತೂರಿ ಆಕಸ್ಮಿಕವಾಗಿ ಹೇಗೆ ಪತ್ತೆಯಾಗಿದೆ ಎಂಬುದನ್ನು ಅವರು ವಿವರಿಸಿದರು.
ಲಂಡನ್‌ನಲ್ಲಿರುವ ನನ್ನ ಸ್ನೇಹಿತನೊಬ್ಬ ಅರೆಕಾಲಿಕ ಮೊಬೈಲ್ ಫೋನ್‌ಗಳನ್ನು ರಿಪೇರಿ ಮಾಡುತ್ತಿದ್ದರು. ಸ್ಪಾಟ್ ಫಿಕ್ಸಿಂಗ್‌ನ ಮಾಸ್ಟರ್‌ಮೈಂಡ್ ಮಝರ್ ಮಜೀದ್ ತನ್ನ ಫೋನ್ ಅನ್ನು ರಿಪೇರಿಗಾಗಿ ನನ್ನ ಸ್ನೇಹಿತನಿಗೆ ಕೊಟ್ಟನು. ಫೋನ್ ರಿಪೇರಿಯಾದ ನಂತರ, ನನ್ನ ಸ್ನೇಹಿತ ಮಝರ್ ಮತ್ತು ಮೂವರು ಪಾಕಿಸ್ತಾನಿ ಆಟಗಾರರ ನಡುವಿನ ಸಂದೇಶಗಳನ್ನು ನೋಡಿದನು. ಆ ಸಂದೇಶಗಳು ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್ ಬಗ್ಗೆ ಸಂಪೂರ್ಣ ವಿವರಗಳನ್ನು ಒಳಗೊಂಡಿವೆ ಎಂದು ರಝಾಕ್ ಹೇಳಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net