ಅಬುಧಾಬಿ: IPL ಮಿನಿ ಹರಾಜಿನಲ್ಲಿ ವಿದೇಶಿ ಕ್ರಿಕೆಟಿಗರಿಗೆ ಎಷ್ಟೇ ಮೊತ್ತದ ಬಿಡ್ ಆದರೂ ಗರಿಷ್ಠ 18 ಕೋಟಿ ರೂ. ಮಾತ್ರ ಗಳಿಸಲಿದ್ದಾರೆ. ಬಿಸಿಸಿಐನ ಮಿನಿ ಹರಾಜು ನಿಯಮಾವಳಿ ಇದಕ್ಕೆ ಕಾರಣವಾಗಿದೆ. ಇದರನ್ವಯ, ಮಿನಿ ಹರಾಜಿನಲ್ಲಿ ವಿದೇಶಿಯರು, ಮೆಗಾ ಹರಾಜಿನ ಗರಿಷ್ಠ ಬಿಡ್ ಮತ್ತು ಗರಿಷ್ಠ ರಿಟೇನ್ ಮೊತ್ತಗಳಲ್ಲಿ ಕನಿಷ್ಠವಾದುದನ್ನಷ್ಟೇ ಪಡೆಯಲಿದ್ದಾರೆ. ಹೀಗಾಗಿ ಕಳೆದ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ ಗರಿಷ್ಠ 27 ಕೋಟಿ ರೂ.ಗೆ ಬಿಕರಿಯಾಗಿದ್ದರೂ, ರಿಟೇನ್ನ ಗರಿಷ್ಠ 18 ಕೋಟಿ ರೂ. ಆಗಿದೆ.
ಇದರಿಂದಾಗಿ ವಿದೇಶಿ ಆಟಗಾರರು ಮಿನಿ ಹರಾಜಿನಲ್ಲಿ ಗರಿಷ್ಠ 18 ಕೋಟಿ ರೂ. ಮಾತ್ರ ಪಡೆಯಲಿದ್ದು, ಬಿಡ್ ಆದ ಹೆಚ್ಚುವರಿ ಮೊತ್ತವನ್ನು ಬಿಸಿಸಿಐ ಆಟಗಾರರ ಕಲ್ಯಾಣ ನಿಧಿಯಾಗಿ ಬಳಸಿಕೊಳ್ಳಲಿದೆ. ಇದರನ್ವಯ ಕ್ಯಾಮರಾನ್ ಗ್ರೀನ್ 25 ಕೋಟಿ ರೂ. ಬಿಡ್ ಪಡೆದರೂ, 18 ಕೋಟಿ ರೂ. ಮಾತ್ರ ಗಳಿಸಲಿದ್ದು, ಬಾಕಿ 7 ಕೋಟಿ ರೂ. ಬಿಸಿಸಿಐ ಪಾಲಾಗಲಿದೆ.