ಇಂಪ್ಯಾಕ್ಟ್ ಪ್ಲೇಯರ್ ಟ್ರಾವಿಸ್ ಹೆಡ್ (6) ಬೇಗನೆ ಔಟಾದರೆ, ಅಭಿಷೇಕ್ ಶರ್ಮ (26) ಕೂಡ ಹೆಚ್ಚು ಸಮಯ ನಿಲ್ಲಲಿಲ್ಲ. ಆಗ ಇಶಾನ್ ಕಿಶನ್ 3ನೇ ವಿಕೆಟ್ಗೆ ಹೆನ್ರಿಕ್ ಕ್ಲಾಸೆನ್ (47) ಜತೆ 41 ಎಸೆತಗಳಲ್ಲಿ 75 ರನ್ ಸೇರಿಸಿ ಚೇಸಿಂಗ್ಗೆ ಬಲ ತುಂಬಿದರು. ಗೆಲುವಿಗೆ ಕೇವಲ 6 ರನ್ ಬೇಕಿದ್ದಾಗ ಕಿಶನ್ ಔಟಾದರು. ಕೊನೆಗೆ 4 ರನ್ ಬೇಕಿದ್ದಾಗ ಕನ್ನಡಿಗ ಆರ್. ಸ್ಮರಣ್ (5) ಬೌಂಡರಿ ಬಾರಿಸಿ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಸನ್ರೈಸರ್ಸ್ ಗೆಲ್ಲಿಸಿದರು. ಇದರೊಂದಿಗೆ ಸನ್ರೈಸರ್ಸ್ ಮಾತ್ರವಲ್ಲದೆ, ಗುಜರಾತ್ ಟೈಟಾನ್ಸ್ಗೂ ಪ್ಲೇಆಫ್ ಟಿಕೆಟ್ ಖಚಿತವಾಯಿತು.