

ಕೊಲಂಬೊ: ಶನಿವಾರದಿಂದ ನಡೆಯಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಗೆ (
Test Series
) ಮುನ್ನ ಆತಿಥೇಯ ಶ್ರೀಲಂಕಾ ತಂಡಕ್ಕೆ ಗಾಯದ ಹೊಡೆತ ಎದುರಾಗಿದೆ. ಪ್ರಮುಖ ಬ್ಯಾಟರ್ಗಳಾದ ಕುಸಲ್ ಮೆಂಡಿಸ್ ಮತ್ತು ಪಥುಮ್ ನಿಸ್ಸಂಕ ಗಾಯದಿಂದಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಸರಣಿಗೆ ಶ್ರೀಲಂಕಾ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಾಗಿದೆ. ಗಾಯದ ಸಮಸ್ಯೆಯಿಂದ ಆಟಗಾರರ ಲಭ್ಯತೆಯ ಗೊಂದಲ ಇದಕ್ಕೆ ಪ್ರಮುಖ ಕಾರಣವೆನಿಸಿದೆ.