ಟೀಮ್​​ ಇಂಡಿಯಾದ ಬೌಲಿಂಗ್​ ದಾಳಿಗೆ ಹರಿಣಗಳು ಧೂಳಿಪಟ: ದ.ಆಫ್ರಿಕಾದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು

Team India
Team India
Published on
ಕಟಕ್​:ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಕಟಕ್‌ನ ಬರಮತಿ ಸ್ಟೇಡಿಯಂ ನಡೆದ ಈ ಪಂದ್ಯದಲ್ಲಿ ಭಾರತ 101 ರನ್‌ಗಳಿಂದ ಗೆದ್ದುಕೊಂಡಿದೆ.
ದಕ್ಷಿಣ ಆಫ್ರಿಕಾ ನಾಯಕ ಐಡನ್ ಮಾರ್ಕ್ರಮ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದರು.ಮೊದಲು ಬ್ಯಾಟ್​ ಮಾಡಿದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 175 ರನ್‌ಗಳನ್ನು ಗಳಿಸಿತು. ಹಾರ್ದಿಕ್ ಪಾಂಡ್ಯ ಕೇವಲ 28 ಎಸೆತಗಳಲ್ಲಿ ಅಜೇಯ 59 ರನ್ ಗಳಿಸಿದರು.
176 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ 12.3 ಓವರ್‌ಗಳಲ್ಲಿ ಆಲ್‌ಔಟ್ ಆಗಿ 74 ರನ್‌ಗಳಿಗೆ ಸೀಮಿತವಾಯಿತು. ಭಾರತೀಯ ಬೌಲರ್‌ಗಳ ಬಿಗಿ ದಾಳಿಗೆ ಹರಿಣಗಳ ವಿಕೆಟ್​ಗಳು ನಾಮುಂದು ತಾಮುಂದು ಎಂದು ನೆಲಕ್ಕುರುಳಿದವು.
ಹಾರ್ದಿಕ್ ಪಾಂಡ್ಯಾ 59* (28 ಬಾಲ್​, 4 ಫೋರ್‌ಗಳು, 4 ಸಿಕ್ಸ್‌ಗಳು) ತನ್ನ ಟಿ20 ವಾಪಸ್ಸು ಪಂದ್ಯದಲ್ಲಿ ಅದ್ಭುತ ಇನಿಂಗ್ಸ್ ಕಟ್ಟಿಕೊಟ್ಟರು. ಅಲ್ಲದೆ, ಬೌಲಿಂಗ್‌ನಲ್ಲಿ ಕೂಡ 1 ವಿಕೆಟ್ ತೆಗೆದುಕೊಂಡರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net