ಕ್ಯಾಪ್ಟನ್​ ಗಿಲ್, ಅಕ್ಷರ್​​ ಆಕರ್ಷಕ ಅರ್ಧಶತಕ; ಮೊದಲ ಏಕದಿನ ಪಂದ್ಯ ಗೆದ್ದ ಟೀಮ್ ಇಂಡಿಯಾ​ | IND vs ENG

IND vs ENG ಮೊದಲ ಏಕದಿನ ಪಂದ್ಯ
IND vs ENG ಮೊದಲ ಏಕದಿನ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಎಜ್‌ಬಾಸ್ಟನ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯ
  • 47.5 ಓವರ್​ ಅಂತ್ಯಕ್ಕೆ 258 ರನ್​ಗೆ ಆಂಗ್ಲರು ಆಲ್​ಔಟ್
  • ಮೊದಲ ಟೆಸ್ಟ್ 6 ವಿಕೆಟ್​ಗಳಿಂದ​ ಗೆದ್ದು ಬೀಗಿದ ಟೀಮ್ ಇಂಡಿಯಾ
IND vs ENG: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಆರು ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿತು.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹ್ಯಾರಿ ಬ್ರೂಕ್​ ಪಡೆ 47.5 ಓವರ್​ ಅಂತ್ಯಕ್ಕೆ 258 ರನ್​ಗೆ ಆಲ್​ಔಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ, ಆರಂಭದಲ್ಲಿ ಶುಭಮನ್​ ಗಿಲ್​ರಿಂದ ಸ್ಫೋಟಕ ಇನ್ನಿಂಗ್ಸ್​ ಸಿಕ್ಕಿದ್ದೇ ಆದರೂ ದಿಗ್ಗಜ ಬ್ಯಾಟರ್​ಗಳಾದ ರೋಹಿತ್​ ಶರ್ಮ (11 ರನ್​) ಮತ್ತು ವಿರಾಟ್​ ಕೊಹ್ಲಿ (5) ವಿಕೆಟ್ ದೊಡ್ಡ ಆಘಾತ ನೀಡಿತು. ನಂತರದಲ್ಲಿ ಕ್ರೀಸ್​ಗಿಳಿದ ಶ್ರೇಯಸ್​ ಅಯ್ಯರ್​ (35), ವಾಷಿಂಗ್ಟನ್ ಸುಂದರ್​ ಮತ್ತು ಅಕ್ಷರ್​ ಪಟೇಲ್​ ತಾಳ್ಮೆಯ ಆಟ ಮೊದಲ ಏಕದಿನ ಗೆಲುವಿಗೆ ಕಾರಣವಾಯಿತು.

ಪಂದ್ಯದ ವಿವರ

ಇಂಗ್ಲೆಂಡ್​ಗೆ ಆರಂಭಿಕ ಬ್ಯಾಟರ್​ ಬೆನ್​ ಡಕೆಟ್ (43 ರನ್​)​ ಉತ್ತಮ ಆರಂಭವನ್ನೇ ನೀಡಿದರು. ಆದರೆ, ಡಕೆಟ್​ಗೆ ಸರಿಯಾದ ಸಾಥ್​ ನೀಡದ ಜಾಕೆಬ್​ ಬೆಥಲ್​ ಕೇವಲ 14 ರನ್​ಗೆ ಔಟ್​ ಆದರು. ಅವರ ಬೆನ್ನಲ್ಲೇ ಕ್ರೀಸ್​ಗಿಳಿದ ಕ್ಯಾಪ್ಟನ್​ ಹ್ಯಾರಿ ಬ್ರೂಕ್ (1)​, ಜಾಸ್​ ಬಟ್ಲರ್ (5)​, ಸ್ಯಾಮ್​ ಕರನ್ (0)​ ತಂಡಕ್ಕೆ ರನ್​ ಕೊಡುಗೆ ನೀಡುವಲ್ಲಿ ವಿಫಲರಾದರು.
ತಂಡದ ಟಾಪ್​ ಆರ್ಡರ್​ ಬ್ಯಾಟರ್​ಗಳೇ ಬ್ಯಾಕ್​ ಟು ಬ್ಯಾಕ್​ ಕೈಕೊಟ್ಟರು ಅಲುಗಾಡದೆ ಕ್ರೀಸ್​ಗೆ ಅಂಟಿ ನಿಂತ ಜೋ ರೂಟ್​ (76 ರನ್​) ಮತ್ತು ಲಿಯಾಮ್​ ಡಾಸನ್​ (68) ಬ್ಯಾಟಿಂಗ್​ ಮೋಡಿ ತಂಡದ ಒಟ್ಟು ಮೊತ್ತವನ್ನು 250ರ ಗಡಿದಾಟಿಸಲು ಸಹಾಯ ಮಾಡಿತು. ಆಲ್​ಔಟ್​ ಆದ ಬ್ರೂಕ್​ ಪಡೆ, 50 ಓವರ್​ನಲ್ಲಿ 258 ರನ್​ ಕಲೆಹಾಕಲಷ್ಟೇ ಶಕ್ತವಾಯಿತು.

ಅಕ್ಷರ್​ ಪಟೇಲ್​ 4 ವಿಕೆಟ್​ಗಳ ಜಾದೂ

ಇನ್ನು, ತಂಡದ ಪರ ಬೌಲಿಂಗ್​ನಲ್ಲಿ ಕಮಾಲ್​ ಮಾಡಿದ ಸ್ಪಿನ್ನರ್​ ಅಕ್ಷರ್ ಪಟೇಲ್​, 4 ಓವರ್​ಗೆ 62 ರನ್ ಕೊಟ್ಟು 4 ವಿಕೆಟ್​ಗಳನ್ನು ಪಡೆದು ಮಿಂಚಿದರು. ಪ್ರಸಿದ್ಧ್​ ಕೃಷ್ಣ, ಗುರ್ನೂರ್​ ಬ್ರಾರ್​ ತಲಾ ಎರಡು ವಿಕೆಟ್​ ಪಡೆದರೆ, ಜಸ್ಪ್ರಿತ್​ ಬುಮ್ರಾ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್​ ಕಬಳಿಸಿದರು. ಒಟ್ಟಾರೆ, ಆಂಗ್ಲರ ಎದುರು ಮೊದಲ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಆಲ್​ರೌಂಡ್​ ಪ್ರದರ್ಶನದಿಂದ ಗೆಲುವು ಸಾಧಿಸಿದ್ದು ಕ್ರಿಕೆಟ್​ ಪ್ರೇಮಿಗಳಲ್ಲಿ ಖುಷಿ ತಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net