ದಕ್ಷಿಣ ಆಫ್ರಿಕಾ ಪರ ನಾಯಕ ಆ್ಯಡಮ್ ಮಾರ್ಕ್ರಾಮ್ (46 ಎಸೆತಗಳಲ್ಲಿ 61 ರನ್, 6 ಬೌಂಡರಿ, 2 ಸಿಕ್ಸರ್) ಗರಿಷ್ಠ ಸ್ಕೋರ್ ಗಳಿಸುವ ಮೂಲಕ ಏಕಾಂಗಿ ಹೋರಾಟ ನಡೆಸಿದರು. ಆದರೆ, ಇದು ತಂಡದ ಗೆಲುವಿಗೆ ಫಲ ನೀಡಲಿಲ್ಲ. ಡೇವಾಲ್ಡ್ ಬ್ರೆವಿಸ್ (2), ಟ್ರಿಸ್ಟಾನ್ ಸ್ಟಬ್ಸ್ (9), ಮತ್ತು ಕಾರ್ಬಿನ್ ಬಾಷ್ (4) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲರಾದರು.